Close Menu
    What's Hot

    ಮಂಗಳೂರಿನಲ್ಲಿ ರೌಡಿಗಳಿಂದ ಗ್ಯಾಂಗ್‌ವಾರ್‌ಗೆ ಯತ್ನ: ತಲವಾರು ಹಿಡಿದು ಸಾರ್ವಜನಿಕರ ಮುಂದೆ ಕಿತ್ತಾಟ, ಆರೋಪಿಗಳ ಬಂಧನಕ್ಕೆ ಬಲೆ

    September 13, 2026

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಹೋಟೆಲ್ ಕೊಠಡಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ: ಜೊತೆಗಿದ್ದ ಉದ್ಯಮಿ ನಾಪತ್ತೆ, ಸಾವಿನ ಸುತ್ತ ಅನುಮಾನ

    September 12, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»8 ತಿಂಗಳ ಹಿಂದೆಯ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿದ್ಯಾರಣ್ಯಪುರದ ಇಬ್ಬರು ಯುವತಿಯರು ಪತ್ತೆ, ಒಬ್ಬಳು ಗರ್ಭಿಣಿ
    ಕರ್ನಾಟಕ

    8 ತಿಂಗಳ ಹಿಂದೆಯ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿದ್ಯಾರಣ್ಯಪುರದ ಇಬ್ಬರು ಯುವತಿಯರು ಪತ್ತೆ, ಒಬ್ಬಳು ಗರ್ಭಿಣಿ

    adminBy adminSeptember 9, 2026No Comments2 Mins Read

    ಬೆಂಗಳೂರು : ವಿದ್ಯಾರಣ್ಯಪುರದಿಂದ  ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಕೇಸ್​​ಗೆ ಇದೀಗ ಬಿಗ್ ಟ್ವಿಸ್ಟ್​ ಸಿಕ್ಕಿದೆ. 8 ತಿಂಗಳ ಹಿಂದೆ ಕಾಲೇಜ್​​​ಗೆ ಹೋಗೋದಾಗಿ ಹೇಳಿ ನಾಪತ್ತೆ ಆಗಿದ್ದ ತನಿಷ್ಕಾ ಹಾಗೂ ತೇಜಸ್ವಿ ಇದೀಗ ಪತ್ತೆಯಾಗಿದ್ದಾರೆ.

    8 ತಿಂಗಳ ಹಿಂದೆ ಇಬ್ಬರು ಮಿಸ್ಸಿಂಗ್

    ಇದೇ ವರ್ಷ ಜನವರಿ 30ರಂದು ವಿದ್ಯಾರಣ್ಯಪುರದ ಇಬ್ಬರು ಯುವತಿಯರು ನಾಪತ್ತೆಯಾಗಿದ್ರು. ಸೆಕೆಂಡ್​ ಪಿಯುಸಿ ಓದ್ತಿದ್ದ ತನಿಷ್ಕಾ ಹಾಗೂ ಫಸ್ಟ್​ ಪಿಯುಸಿ ಓದ್ತಿದ್ದ ಅಪ್ರಾಪ್ತ ಯುವತಿ ತೇಜಸ್ವಿನಿ ಮನೆ ಬಿಟ್ಟು ಹೋಗಿದ್ರು. ಬಳಿಕ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು ಪತ್ತೆ ಮಾಡಲು ಮುಂದಾಗಿದ್ದರು. ನಾಪತ್ತೆಯಾಗಿ ಆಗಿ ತಿಂಗಳುಗಳು ಕಳೆದ್ರೂ ಪೊಲೀಸರಿಗೆ ಯುವತಿಯರ ಸುಳಿವು ಸಿಕ್ಕಿರಲಿಲ್ಲ.

    ಕೊನೆಗೂ ಸಿಕ್ಕಿಬಿದ್ದರು ಯುವತಿಯರು

    ಈ ವೇಳೆ ತನಿಷ್ಕಾ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಹೈಕೋರ್ಟ್​ ಪ್ರಕರಣವನ್ನ ಸಿಐಡಿಗೆ ವರ್ಗಾವಣೆ ಮಾಡಿತ್ತು. ಕಳೆದ ಮೂರು ತಿಂಗಳಿಂದ ಸಿಐಡಿ ಟೀಮ್ ಈ ಇಬ್ಬರು ಯುವತಿಯರಿಗಾಗಿ​ ಹುಡುಕಾಟ ನಡೆಸಿತ್ತು. ಕುಟುಂಬಸ್ಥರ ಹಾಗೂ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡ್ತಿದ್ದ ಯುವತಿಯರು ಕೊನೆಗೂ ಸಿಕ್ಕಿಬಿದ್ದಿದ್ದಾರೆ.

    ಬೆಟ್ಟಕ್ಕೆ ಹೋದವರು ಬಳಿಕ ಏನಾದ್ರು?

    ವಿದ್ಯಾರಣ್ಯಪುರ ಪೊಲೀಸರ ತನಿಖೆ ವೇಳೆ ಯುವತಿಯರು ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದು ಪತ್ತೆಯಾಗಿತ್ತು. ಅಲ್ಲಿಗೆ ತೆರಳಿ ಮಗು ಜೊತೆಗೆ ಆಟವಾಡಿದ್ದ ಇಬ್ಬರೂ ಒಂದು ಸೆಲ್ಫಿ ಫೋಟೋ ತೆಗೆದುಕೊಂಡಿದ್ದರು ಅಷ್ಟೇ. ಬಳಿಕ ಯುವತಿಯರ ಸುಳಿವೇ ಸಿಕ್ಕಿರಲಿಲ್ಲ. ಇದೀಗ ಸಿಐಡಿ ಆಫೀಸರ್​​ ಕೈಗೆ ಯುವತಿಯರು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

    ಸಿಮ್​ ಖರೀದಿಸಲು ಹೋಗಿ ಸಿಕ್ಕಿಬಿದ್ದರು

    ಸಿಮ್ ಕಾರ್ಡ್ ಖರೀದಿ ಮಾಡಲು ಹೋಗಿದ್ದ ತನಿಷ್ಕಾ ಸಿಐಡಿ ಆಫೀಸರ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಿಕ್ಕಿಬಿದ್ದ ಯುವತಿಯರು 8 ತಿಂಗಳ ಕಥೆಯನ್ನ ಬಾಯ್ಬಿಟ್ಟಿದ್ದಾರೆ. ಮಲೈ ಮಹದೇಶ್ವರ ಬೆಟ್ಟದಲ್ಲಿ ಈ ಇಬ್ಬರು ಯುವತಿಯರಿಗೆ ಓರ್ವ ಯುವಕನ ಪರಿಚಯವಾಯ್ತಂತೆ. ಮನೆಯಲ್ಲಿನ ಒತ್ತಡದಿಂದ ಯುವಕನ ಬಳಿ ನಮಗೆ ಅಪ್ಪ-ಅಮ್ಮ ಇಲ್ಲ ಅಂತ ಸುಳ್ಳು ಹೇಳಿದ್ದರು ಎನ್ನಲಾಗ್ತಿದೆ.

    ಮದುವೆಯೂ ಆಯ್ತು ಈಗ ಗರ್ಭಿಣಿ

    ನಾನು ಹಾಗೂ ನನ್ನ ತಂಗಿ ಇಬ್ಬರೇ ಇದ್ದು, ನಮಗೆ ಅಪ್ಪ-ಅಮ್ಮ , ಕುಟುಂಬ ಯಾರೂ ಇಲ್ಲ ಎಂದಿದ್ದಾರೆ. ಬಳಿಕ ಆ ಯುವಕನ ಜೊತೆಗೆ ಇಬ್ಬರೂ ಹೋಗಿದ್ದರು. ಇಬ್ಬರು ಯುವತಿಯರಲ್ಲಿ ತನಿಷ್ಕಾ ಆ ಯುವಕನನ್ನೇ ಮದುವೆಯಾಗಿದ್ದು, ಒಟ್ಟಿಗೆ ಸಂಸಾರ ನಡೆಸಿಕೊಂಡಿದ್ದರು. ತಂಗಿ ಎಂದು ಹೇಳಿಕೊಂಡು ತೇಜಸ್ವಿನಿಯನ್ನು ಜೊತೆಗೆ ಇಟ್ಟುಕೊಂಡಿದ್ದಳು. ಯುವಕನನ್ನ ಮದುವೆಯಾಗಿದ್ದ ತನಿಷ್ಕಾ ಈಗ ಗರ್ಭಿಣಿ ಆಗಿದ್ದಾಳೆ.

    ಆಧಾರ್ ಕಾರ್ಡ್ ನಂಬರ್ ಬಳಸಿ ಸಿಕ್ಕಿಬಿದ್ದಳು

    ಆಧಾರ್ ಕಾರ್ಡ್ ನೀಡಿ ಸಿಮ್ ಖರೀದಿ ಮಾಡಲು ತನಿಷ್ಕಾ ಮುಂದಾಗಿದ್ದಳು. ಈ ವೇಳೆ ಸಿಐಡಿಗೆ ಆಧಾರ್ ಕಾರ್ಡ್ ನಂಬರ್ ಬಳಕೆ ಆಗಿರೋ ಬಗ್ಗೆ ಸರ್ವಿಸ್ ಪ್ರೊವೈಡರ್ ನಿಂದ ಮಾಹಿತಿ ಬಂದಿದೆ. ಮಾಹಿತಿ ಆಧರಿಸಿ ತೆರಳಿದ್ದ ಸಿಐಡಿ, ಪರಿಶೀಲನೆ ನಡೆಸಿದ ವೇಳೆ ಇಬ್ಬರೂ ಪತ್ತೆಯಾಗಿದ್ದಾರೆ. ಇಬ್ಬರನ್ನ ಕೂಡ ಇಂದು ಹೈಕೋರ್ಟ್ ಮುಂದೆ ಹಾಜರು ಪಡಿಸಲು ಸಿಐಡಿ ಮುಂದಾಗಿದೆ.




    #karnataka
    Previous Articleಇರಾನ್-ಅಮೆರಿಕ ಸಂಘರ್ಷದ ಎಫೆಕ್ಟ್: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಭಾರಿ ಏರಿಕೆ
    Next Article ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಮತ್ತೆ ಟ್ವಿಸ್ಟ್: ‘ಕೊಲೆಯೇ ಆಗಿತ್ತು’ ಎಂದು ಮರಣೋತ್ತರ ಪರೀಕ್ಷಾ ಸಿಬ್ಬಂದಿಯಿಂದ ಸ್ಫೋಟಕ ಹೇಳಿಕೆ

    Related Posts

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026

    ಊಟ ಮಾಡುತ್ತಿದ್ದ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ: ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾದ ಆರೋಪಿ

    September 12, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರಿನಲ್ಲಿ ರೌಡಿಗಳಿಂದ ಗ್ಯಾಂಗ್‌ವಾರ್‌ಗೆ ಯತ್ನ: ತಲವಾರು ಹಿಡಿದು ಸಾರ್ವಜನಿಕರ ಮುಂದೆ ಕಿತ್ತಾಟ, ಆರೋಪಿಗಳ ಬಂಧನಕ್ಕೆ ಬಲೆ

    September 13, 2026

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಹೋಟೆಲ್ ಕೊಠಡಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ: ಜೊತೆಗಿದ್ದ ಉದ್ಯಮಿ ನಾಪತ್ತೆ, ಸಾವಿನ ಸುತ್ತ ಅನುಮಾನ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.