ಚಾಮರಾಜನಗರ: ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಹನೂರಿನಲ್ಲಿ ಮೂವರು ಬಲಿ ವೇಳೆ ಸ್ಥಳದಲ್ಲಿದ್ದರೂ ಬಚಾವಾಗಿದ್ದ ಮಹಿಮದಾಸ್ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅರಣ್ಯ ಸಿಬ್ಬಂದಿ ಶೂಟೌಟ್ ಮಾಡುವೆ ವೇಳೆ ಪರಾರಿಯಾಗಿ ಆಸ್ಪತ್ರೆ ಸೇರಿದ್ದೆ, ಈಗ ಹೊರ ಬರಲು ಭಯ ಆಗ್ತಿದೆ. ಕೇಸ್ ಬಗ್ಗೆ ಪೊಲೀಸರು, ಅರಣ್ಯ ಇಲಾಖೆ ತನಿಖೆ ಮಾಡ್ತಿದ್ದಾರೆ. ವಿಚಾರಣೆಗೆ ಬರುವಂತೆ ಹೇಳ್ತಿದ್ದಾರೆ. ಆದ್ರೆ ನನಗೆ ಪೊಲೀಸ್ ಅಂದ್ರೆ ಭಯ. ಆ ಕಾರಣದಿಂದ ಆಚೆ ಬರಲು ಹಿಂದೇಟು ಹಾಕುತ್ತಿರುವೆ ಎಂದವರು ತಿಳಿಸಿದ್ದಾರೆ.








