ವಾಷಿಂಗ್ಟನ್: ಕಳೆದ ಎರಡು ವರ್ಷಗಳಲ್ಲಿ ತಮ್ಮ ತಂದೆ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಮೂರು ಬಾರಿ ಹತ್ಯೆಯ ಪ್ರಯತ್ನಗಳು ನಡೆದ ನಂತರ, ಅವರ 20 ವರ್ಷದ ಪುತ್ರ ಬ್ಯಾರನ್ ಟ್ರಂಪ್ ಏಕಾಂತ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ
ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ತಮ್ಮ ಎರಡನೇ ವರ್ಷದ ವ್ಯಾಸಂಗವನ್ನು ಪೂರ್ಣಗೊಳಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಪುತ್ರ ಬ್ಯಾರನ್ ಟ್ರಂಪ್, ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದೆ ಅಂತರ ಕಾಯ್ದುಕೊಂಡಿದ್ದಾರೆ. ಬ್ಯಾರನ್ ತಮ್ಮ ಬೇಸಿಗೆಯ ಹೆಚ್ಚಿನ ಸಮಯವನ್ನು ನ್ಯೂಜೆರ್ಸಿಯ ‘ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್ ಬೆಡ್‌ಮಿನ್‌ಸ್ಟರ್’ನಲ್ಲಿ ತಮ್ಮ ತಾಯಿ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರೊಂದಿಗೆ ಕಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಬ್ಯಾರನ್ ಟ್ರಂಪ್ ಮನೆಯಿಂದ ಹೊರಗೆ ಹೋಗುವುದಿಲ್ಲ. ಅವರಿಗೆ ಸಾರ್ವಜನಿಕ ಉಪಸ್ಥಿತಿಯನ್ನು ಕಡಿಮೆ ಮಾಡುವಂತೆ ಸಿಕ್ರೇಟ್ ಸರ್ವೀಸ್ ಸಲಹೆ ಇದೆ” ಎಂದು ಡೊನಾಲ್ಡ್ ಟ್ರಂಪ್ ಅವರಿಗೆ ಆಪ್ತರಾದ ಮೂಲವೊಂದು, ಅಮೆರಿಕದ ಮಾಧ್ಯಮಗಳಿಗೆ ತಿಳಿಸಿದೆ. “ಬ್ಯಾರನ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ, ಅದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ ಮತ್ತು ಖಾಸಗಿ ತಾಣಗಳಿಗೆ ತ್ವರಿತವಾಗಿ ತೆರಳುತ್ತಾರೆ” ಎಂದು ವರದಿ ಉಲ್ಲೇಖಿಸಿದೆ.
ಜೀವನ ತುಂಬಾ ಖಾಸಗಿ:
ಬ್ಯಾರನ್ ಅವರು ಇತ್ತೀಚಿಗೆ ಹತ್ಯೆಗೀಡಾದ ಸಂಪ್ರದಾಯವಾದಿ ಕಾರ್ಯಕರ್ತ ಚಾರ್ಲಿ ಕಿರ್ಕ್ ಅವರೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದರು. ಅವರ ಹತ್ಯೆಯ ಬಳಿಕ ತಮ್ಮ ತಂದೆಗೆ ಕರೆ ಮಾಡಿ, “ನೀವೂ ಕೂಡ ಹೊರಗೆ ಹೋದಾಗ ಇದೇ ರೀತಿ ದಾಳಿಯಾಗುತ್ತದೆ” ಎಂದು ಎಚ್ಚರಿಸಿದ್ದರು. ಇತ್ತೀಚಿನ ಬೆದರಿಕೆಗಳ ಹಿನ್ನೆಲೆಯಲ್ಲಿ
“ಇತ್ತೀಚಿನ ಬೆದರಿಕೆಗಳ ಹಿನ್ನೆಲೆಯಲ್ಲಿ ಬ್ಯಾರನ್ ಟ್ರಂಪ್ ಅವರ ಖಾಸಗಿ ಜೀವನದ ಬಗ್ಗೆ ಯಾವುದೇ ವಿವರಗಳನ್ನು ಎಲ್ಲಾ ವರದಿಗಳಿಂದ ಹೊರಗಿಡಬೇಕು” ಎಂದು ಮೆಲಾನಿಯಾ ಅವರ ಕಚೇರಿ ಪ್ರಕಟಣೆಗೆ ತಿಳಿಸಿದೆ. ಪ್ರಥಮ ಮಹಿಳೆ ತನ್ನ ಮಗನನ್ನು ರಕ್ಷಿಸುತ್ತಿದ್ದು, ಖಾಸಗಿ ಬದುಕುವ ಆತನ ಆಯ್ಕೆಯನ್ನು ಗೌರವಿಸುತ್ತಾರೆ.
ಇರಾನ್‌ನಿಂದ ಬೆದರಿಕೆ:
ಈ ವಾರದ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ಕುಟುಂಬಕ್ಕೆ ಅಸಾಮಾನ್ಯ ಬೆದರಿಕೆಯಾಗಿ, ಇರಾನ್‌ನ ರಾಜ್ಯ ದೂರದರ್ಶನವು ಬ್ಯಾರನ್ ಟ್ರಂಪ್ ಅವರನ್ನು ತಲುಪುವ ಮಾರ್ಗಗಳನ್ನು ವಿವರಿಸುವ ಒಂದು ಭಾಗವನ್ನು ಪ್ರಸಾರ ಮಾಡಿತು ಮತ್ತು 10 ಮಿಲಿಯನ್ (ಅಂದಾಜು 95 ಕೋಟಿ ರೂ. ) ಬಹುಮಾನವನ್ನು ಘೋಷಿಸಿತು.
IRGC-ಸಂಯೋಜಿತ ಮಾಧ್ಯಮವು ಬಿಡುಗಡೆ ಮಾಡಿದ ಮತ್ತು ಇರಾನ್‌ನ ರಾಜ್ಯ ದೂರದರ್ಶನದ ಚಾನೆಲ್ 3ನಲ್ಲಿ ಪ್ರಸಾರವಾದ “ಬ್ಯಾರನ್ ಟ್ರಂಪ್ ಅನ್ನು ಎಲ್ಲಿ ಕೊಲ್ಲುವುದು” ಎಂಬ ಶೀರ್ಷಿಕೆಯ ವಿಡಿಯೋದಲ್ಲಿ, 20 ವರ್ಷದ ಯುವಕನ ಚಲನವಲನಗಳನ್ನು ವಿವರಿಸಲಾಗಿದೆ. ಇರಾನ್‌ನಿಂದ ಬಂದಿರುವ ಬೆದರಿಕೆಯ ಬಗ್ಗೆ ಸೀಕ್ರೆಟ್ ಸರ್ವಿಸ್‌ಗೆ ಅರಿವಿದೆ. ಡೊನಾಲ್ಡ್ ಟ್ರಂಪ್ ಹತ್ಯೆಗೂ ಇರಾನ್ ಯೋಜನೆ ರೂಪಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.








