Close Menu
    What's Hot

    ಮಂಗಳೂರಿನ ಧಕ್ಕೆಗೆ ಸಿಎಂ ದಿಢೀರ್ ಭೇಟಿ; ಮೀನು ಮಾರಾಟ ಬಂದ್ ಮಾಡಿಸಿದ್ದಕ್ಕೆ ಅಧಿಕಾರಿಗಳ ವಿರುದ್ಧ ಗರಂ

    September 19, 2026

    ಮಂಗಳೂರು: ಮ್ಯಾಟ್ರಿಮೊನಿ ಆ್ಯಪ್ ಮೂಲಕ ಪರಿಚಯ; ಮದುವೆ ನೆಪದಲ್ಲಿ ಮಹಿಳೆಗೆ ₹1.91 ಲಕ್ಷ ವಂಚನೆ

    September 19, 2026

    ಇನ್ನು ಬಣ್ಣದ ಲೋಕಕ್ಕೆ ಮರಳಲ್ಲ ಎಂದ ಅನಂತ್ ನಾಗ್; ಕಾರಣವೇನು?

    September 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಂಗಳೂರು: ಮ್ಯಾಟ್ರಿಮೊನಿ ಆ್ಯಪ್ ಮೂಲಕ ಪರಿಚಯ; ಮದುವೆ ನೆಪದಲ್ಲಿ ಮಹಿಳೆಗೆ ₹1.91 ಲಕ್ಷ ವಂಚನೆ
    ಅಪರಾಧ

    ಮಂಗಳೂರು: ಮ್ಯಾಟ್ರಿಮೊನಿ ಆ್ಯಪ್ ಮೂಲಕ ಪರಿಚಯ; ಮದುವೆ ನೆಪದಲ್ಲಿ ಮಹಿಳೆಗೆ ₹1.91 ಲಕ್ಷ ವಂಚನೆ

    adminBy adminSeptember 19, 2026No Comments1 Min Read

    ಮಂಗಳೂರು: ಮ್ಯಾಟ್ರಿಮೊನಿ ಆ್ಯಪ್ ಮೂಲಕ ಪರಿಚಯವಾಗಿ, ಲಂಡನ್‌ನ ಮಕ್ಕಳ ವೈದ್ಯನೆಂದು ನಂಬಿಸಿ ಮದುವೆಯಾಗುವುದಾಗಿ ವಂಚಿಸಿ 45 ವರ್ಷದ ಮಹಿಳೆಯೊಬ್ಬರಿಂದ ₹1,91,500 ಹಣ ಪಡೆದು ವಂಚಿಸಿರುವ ಭೀಕರ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಮಂಗಳೂರು ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಂತ್ರಸ್ತ ಮಹಿಳೆಯು ಕಳೆದ ಜೂನ್ ತಿಂಗಳಿನಲ್ಲಿ ‘ಕಮ್ಯುನಿಟಿ ಮ್ಯಾಟ್ರಿಮೊನಿ’ ಆ್ಯಪ್‌ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಂಡಿದ್ದರು. ಸೆಪ್ಟೆಂಬರ್ 5, 2026 ರಂದು ಅಪರಿಚಿತ ವ್ಯಕ್ತಿಯೊಬ್ಬ ತಾನು ‘ಡಾ. ಸುರೇಶ್, ಲಂಡನ್‌ನಲ್ಲಿ ಮಕ್ಕಳ ವೈದ್ಯ’ ಎಂದು ಪರಿಚಯಿಸಿಕೊಂಡು ಆ್ಯಪ್‌ನಿಂದ ಪಡೆದ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೆಸೇಜ್ ಮಾಡಿದ್ದನು. ಇದನ್ನು ನಂಬಿದ ಮಹಿಳೆ ಆತನೊಂದಿಗೆ ಸಂಭಾಷಣೆ ನಡೆಸಿದ್ದು, ಆತ ಲಂಡನ್‌ನಿಂದ ಭಾರತಕ್ಕೆ ಬಂದು ಮದುವೆಯಾಗುವುದಾಗಿ ನಂಬಿಸಿದ್ದನು.

    ಸೆಪ್ಟೆಂಬರ್ 14 ರಂದು ತಾನು ಲಂಡನ್‌ನಿಂದ ಭಾರತಕ್ಕೆ ಹೊರಟಿರುವುದಾಗಿ ನಂಬಿಸಿದ್ದ ಆರೋಪಿ, ಮರುದಿನ ಮುಂಬೈ ವಿಮಾನ ನಿಲ್ದಾಣ ತಲುಪಿರುವುದಾಗಿ ತಿಳಿಸಿದ್ದನು. ವಿಮಾನ ನಿಲ್ದಾಣದಲ್ಲಿ ‘ಹೆಲ್ತ್ ಚೆಕ್ ಅಪ್’ ಮಾಡಲು ತನ್ನ ಬಳಿ ಭಾರತೀಯ ಕರೆನ್ಸಿ ಇಲ್ಲ ಎಂದು ನೆಪ ಹೇಳಿ ಮೊದಲಿಗೆ ₹42,500 ಹಣವನ್ನು ಗೂಗಲ್ ಪೇ ಮಾಡುವಂತೆ ಕೇಳಿದ್ದನು. ಅದನ್ನು ನಂಬಿದ ಮಹಿಳೆ ಆರೋಪಿ ನೀಡಿದ ‘ಬ್ಯಾಂಕ್ ಆಫ್ ಬರೋಡಾ’ ಖಾತೆಗೆ ಹಣ ವರ್ಗಾಯಿಸಿದ್ದರು.

    ಇದಾದ ಕೆಲವೇ ಸಮಯದಲ್ಲಿ, ಕಸ್ಟಮ್ಸ್ ಅಧಿಕಾರಿಗಳು ತನ್ನ ಲಗೇಜ್ ಹಾಗೂ ಫೋನ್ ವಶಪಡಿಸಿಕೊಂಡಿದ್ದು, ಅವರನ್ನು ಬಿಡಿಸಲು ₹1,49,000 ಹಣ ನೀಡಬೇಕೆಂದು ಕೋರಿದ್ದನು. ಮಹಿಳೆ ಪುನಃ ಅದೇ ಬ್ಯಾಂಕ್ ಖಾತೆಗೆ ₹1,49,000 ಹಣ ರವಾನಿಸಿದ್ದರು. ಇಷ್ಟಕ್ಕೇ ಸುಮ್ಮನಾದ ವಂಚಕ, ಪುನಃ ₹3 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಾಗ ಮಹಿಳೆಗೆ ಇದು ಆನ್‌ಲೈನ್ ಸೈಬರ್ ಸ್ಕ್ಯಾಮ್ ಎಂಬ ಅನುಮಾನ ಮೂಡಿದೆ. ತಕ್ಷಣವೇ ಯಾವುದೇ ಹಣವನ್ನು ವರ್ಗಾಯಿಸದೆ, ಹಂತ ಹಂತವಾಗಿ ಒಟ್ಟು ₹1,91,500 ಹಣ ಪಡೆದು ವಂಚಿಸಿದ ‘ಡಾ. ಸುರೇಶ್’ ಎಂಬಾತನ ವಿರುದ್ಧ ಸಿಇಎನ್  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಕಾಯ್ದುಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ




    #crime #dakshinakannada
    Previous Articleಇನ್ನು ಬಣ್ಣದ ಲೋಕಕ್ಕೆ ಮರಳಲ್ಲ ಎಂದ ಅನಂತ್ ನಾಗ್; ಕಾರಣವೇನು?
    Next Article ಮಂಗಳೂರಿನ ಧಕ್ಕೆಗೆ ಸಿಎಂ ದಿಢೀರ್ ಭೇಟಿ; ಮೀನು ಮಾರಾಟ ಬಂದ್ ಮಾಡಿಸಿದ್ದಕ್ಕೆ ಅಧಿಕಾರಿಗಳ ವಿರುದ್ಧ ಗರಂ

    Related Posts

    ಮಂಗಳೂರಿನ ಧಕ್ಕೆಗೆ ಸಿಎಂ ದಿಢೀರ್ ಭೇಟಿ; ಮೀನು ಮಾರಾಟ ಬಂದ್ ಮಾಡಿಸಿದ್ದಕ್ಕೆ ಅಧಿಕಾರಿಗಳ ವಿರುದ್ಧ ಗರಂ

    September 19, 2026

    ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು; 549 ಕೋಟಿ ರೂ. ಯೋಜನೆಗೆ ಹಸಿರು ನಿಶಾನೆ

    September 18, 2026

    ಕರಾವಳಿ ಅಭಿವೃದ್ಧಿಗೆ ಬಂಪರ್ ಕೊಡುಗೆ; 32,611 ಕೋಟಿ ರೂ. ಯೋಜನೆಗಳಿಗೆ ಸಂಪುಟ ಅಸ್ತು

    September 18, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರಿನ ಧಕ್ಕೆಗೆ ಸಿಎಂ ದಿಢೀರ್ ಭೇಟಿ; ಮೀನು ಮಾರಾಟ ಬಂದ್ ಮಾಡಿಸಿದ್ದಕ್ಕೆ ಅಧಿಕಾರಿಗಳ ವಿರುದ್ಧ ಗರಂ

    September 19, 2026

    ಮಂಗಳೂರು: ಮ್ಯಾಟ್ರಿಮೊನಿ ಆ್ಯಪ್ ಮೂಲಕ ಪರಿಚಯ; ಮದುವೆ ನೆಪದಲ್ಲಿ ಮಹಿಳೆಗೆ ₹1.91 ಲಕ್ಷ ವಂಚನೆ

    September 19, 2026

    ಇನ್ನು ಬಣ್ಣದ ಲೋಕಕ್ಕೆ ಮರಳಲ್ಲ ಎಂದ ಅನಂತ್ ನಾಗ್; ಕಾರಣವೇನು?

    September 18, 2026

    ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು; 549 ಕೋಟಿ ರೂ. ಯೋಜನೆಗೆ ಹಸಿರು ನಿಶಾನೆ

    September 18, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಇನ್ನು ಬಣ್ಣದ ಲೋಕಕ್ಕೆ ಮರಳಲ್ಲ ಎಂದ ಅನಂತ್ ನಾಗ್; ಕಾರಣವೇನು?

    September 18, 2026

    ಪುತ್ತೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು; 549 ಕೋಟಿ ರೂ. ಯೋಜನೆಗೆ ಹಸಿರು ನಿಶಾನೆ

    September 18, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.