Author: admin
16 ವರ್ಷದ ಬಾಲಕಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಸ್ ಚಾಲಕ ಹಾಗೂ ಕಂಡಕ್ಟರ್‌ರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬಾಲಕಿಯನ್ನು ಸುಮಾರು 47 ಕಿಲೋಮೀಟರ್ ದೂರ ಕರೆದೊಯ್ದು ಬಳಿಕ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಸಮೀಪದ ರಿಂಗ್ ರೋಡ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಆಗಸ್ಟ್ 4ರ ರಾತ್ರಿ ಕಾಶ್ಮೀರಿ ಗೇಟ್ ಪ್ರದೇಶದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಕುಲದೀಪ್ ಹಾಗೂ ಕಂಡಕ್ಟರ್ ಸಂದೀಪ್‌ನನ್ನು ಬಂಧಿಸಲಾಗಿದೆ. ಸಂತ್ರಸ್ತೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ನಿವಾಸಿಯಾಗಿದ್ದು, 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಗಸ್ಟ್ 4ರಂದು ಕುಟುಂಬದವರೊಂದಿಗೆ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಬಾಲಕಿ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದಳು. ನೋಯ್ಡಾದಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿಯಾಗಲು ಆಕೆ ತೆರಳುತ್ತಿದ್ದಳು. ಭಾರಿ ಮಳೆ ಹಾಗೂ ಕತ್ತಲಿನ ಕಾರಣದಿಂದಾಗಿ ದಾರಿ ತಪ್ಪಿದ ಬಾಲಕಿ ತಪ್ಪಾಗಿ ಪರಿಚೌಕ್‌ನಲ್ಲಿ ಇಳಿದಿದ್ದಳು.…
ಬೆಂಗಳೂರು : ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಐಡಿ ತನಿಖೆಯ ವೇಳೆ ಕೆಲವು ಸ್ಪೋಟಕ ಅಂಶಗಳು ಪತ್ತೆಯಾಗಿದ್ದು ಎಲ್ಲಾ ಪರೀಕ್ಷೆಗಳ ಉಸ್ತುವಾರಿಯನ್ನು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹೊಂದಿದ್ದರು ಪ್ರಶ್ನೆ ಪತ್ರಿಕೆ ಅಸಲಿಕೆ ಸೋರಿಕೆ ಮಾಡಿದ್ದೆ ಜ್ಞಾನೇಂದ್ರ ಕುಮಾರ್ ಎಂದು ಸಿಐಡಿ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ ಹಾಗೂ ಇತರರ ಮೂಲಕ ಮಾರಾಟ ಮಾಡಲಾಗಿದ್ದು, 40 ಲಕ್ಷಕ್ಕೆ ಒಂದು ಪ್ರಶ್ನೆ ಪತ್ರಿಕೆ ಪಡೆದಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಅಭ್ಯರ್ಥಿಗಳಿಂದ ವಿವಿಧ ಮಾರ್ಗದಲ್ಲಿ ಹಣವನ್ನು ವಸೂಲಿ ಮಾಡಿದ್ದಾರೆ. ಈ ಹಿನ್ನೆಲೆ ಜಾನೇಂದ್ರ ಕುಮಾರ ಬಂಧನವಾಗಿದೆ ಅಲ್ಲದೆ ಮತ್ತೊಂದು ಕಡೆ ಜ್ಞಾನೇಂದ್ರ ಕುಮಾರ್ ಸಾಕ್ಷಿ ನಾಶ ಕೂಡ ಯತ್ನಿಸಿದ್ದರು ಎನ್ನಲಾಗಿದೆ. ಒಎಂಆರ್ ತಿದ್ದುಪಡಿ, ಸ್ಟ್ರಾಂಗ್ ರೂಮ್ ಸಿಸಿಟಿವಿ ದೃಶ್ಯವನ್ನು ನಾಶಪಡಿಸುವ ಯತ್ನವನ್ನು ಜ್ಞಾನೇಂದ್ರ ಕುಮಾರ್ ಮಾಡಿದ್ದರು. ಇನ್ನು ಬೀದರ್ ಮೂಲದ ಬಸವರಾಜ್ ಕನ್ನಾಳೆ ಮಧ್ಯವರ್ತಿಯಾಗಿದ್ದು ಮುಖ್ಯ ಮಧ್ಯವರ್ತಿಯಾಗಿ ಬಸವರಾಜ್ ಈ ಒಂದು ಕೆಲಸ ಮಾಡಿದ್ದಾನೆ. ಬಸವರಾಜ್…
ಪುತ್ತೂರು : ಜೆರಾಕ್ಸ್ ಅಂಗಡಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ಮತ್ತು ಪ್ರಕರಣದಲ್ಲಿ ಪೋಲೀಸರ ನಿರ್ಲಕ್ಷ್ಯ ಖಂಡಿಸಿ ಹಿಂದೂಪರ ಸಂಘಟನೆಳು ನಾಳೆ ಪುತ್ತೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದರ್ಬೆ ವೃತ್ತದಿಂದ ನಾಳೆ ಬೆಳಗ್ಗೆ 10 ಗಂಟೆಗೆ ಮೆರವಣಿಗೆಯ ಮೂಲಕ ಆಗಮಿಸಲಿರುವ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಸಾಗಿ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಹೆಚ್ಚುವರಿ ಪೋಲೀಸರನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಪೋಲೀಸರು ಷರತ್ತುಬದ್ಧ ಅನುಮತಿಯನ್ನು ನೀಡಿದ್ದಾರೆ. ಕಾರ್ಯಕ್ರಮಕ್ಕೆ ನಿಯೋಜಿಸಲಾಗಿರುವ ಬಂದೋಬಸ್ತ್ ವಿವರ: * ಎಡಿಶನಲ್ ಎಸ್ಪಿ -01 * ಡಿ.ವೈ.ಎಸ್.ಪಿ – 01 * ಪಿ.ಐ – 03 * ಪಿ.ಎಸ್.ಐ – 10 * ಎ.ಎಸ್.ಐ – 14 * ಸಿಬ್ಬಂದಿಗಳು – 139 * ಕೆ.ಎಸ್.ಆರ್.ಪಿ ತುಕಡಿ -05 * ಎಸ್.ಎ.ಎಫ್ ತಂಡ – 02 * ಡಿ.ಎ.ಆರ್ ತುಕಡಿ -07
ಮುಂಬೈ: ಮಹಾರಾಷ್ಟ್ರದ ಪ್ರತಿಷ್ಠಿತ ರೆಸ್ಟೋರೆಂಟ್‌ಗಳು ಮತ್ತು ಪುಣೆಯ ಸಿಪ್ಲಾ ಔಷಧ ಸೌಲಭ್ಯದ ವಿರುದ್ಧ FDA ಕೈಗೊಂಡಿದ್ದ ಕ್ರಮಗಳ ಬಗ್ಗೆ ಬಾಂಬೆ ಹೈಕೋರ್ಟ್ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಆವರಣದಲ್ಲಿರುವ ಐದು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದ FDA, ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ ಎಂದು ಕ್ರಮ ಕೈಗೊಂಡಿತ್ತು. ಆದರೆ, ಮರುತಪಾಸಣೆಯಲ್ಲಿ ಶೇ.88ರಷ್ಟು ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ FDA ಅನಗತ್ಯ ಆತುರದಿಂದ ಕ್ರಮ ಕೈಗೊಂಡಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ರೆಸ್ಟೋರೆಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಕ್ಕೆ FDA ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ʼನಿಮ್ಮನ್ನು ನೀವೇ ದೇವರೆಂದುಕೊಂಡಿದ್ದೀರಾ? ಏನು ಬೇಕಾದರೂ ಮಾಡಬಹುದೇ? ಎಂದು ಕಟುವಾಗಿ ಪ್ರಶ್ನಿಸಿದೆ. ಕಾನೂನನ್ನು ಸರಿಯಾಗಿ ಪರಿಶೀಲಿಸದೆ ಮತ್ತು ಪ್ರಾಯೋಗಿಕ ದೃಷ್ಟಿಕೋನ ಇಲ್ಲದೆ ಕ್ರಮ ಕೈಗೊಂಡಿರುವುದಕ್ಕೆ ತುಕಾರಾಮ್ ಮುಂಢೆ ನೇತೃತ್ವದ FDA ತಂಡವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ದಾಳಿಯ ವೇಳೆ ನೀಡಿದ್ದ ಆದೇಶವನ್ನು ಹಿಂಪಡೆಯಲು FDA ಒಪ್ಪಿಕೊಂಡಿದೆ. MCAಗೆ…
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ’ದ ಆವರಣದಲ್ಲಿ ಭಾನುವಾರ ಭಾರೀ ಹೈಡ್ರಾಮಾ ನಡೆದಿದೆ. ಕಾರ್ಯಕ್ರಮವೊಂದಕ್ಕೆ ನಟ ಪ್ರಕಾಶ್ ರಾಜ್ ಆಗಮಿಸಿದ್ದನ್ನು ವಿರೋಧಿಸಿ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದು, ವಾತಾವರಣ ಉದ್ವಿಗ್ನಗೊಂಡಿತ್ತು. ಕರ್ನಾಟಕ ಸಮುದಾಯ ಸಂಘಟನೆಯ ನೇತೃತ್ವದಲ್ಲಿ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ‘ಮನುಷ್ಯತ್ವದೆಡೆಗೆ ಸಮುದಾಯದ ಜಾಥಾ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಸಂವಾದದಲ್ಲಿ ಭಾಗವಹಿಸಲು ನಟ ಪ್ರಕಾಶ್ ರಾಜ್ ಆಗಮಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಮಾಯಿಸಿದ ಪ್ರತಿಭಟನಾಕಾರರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರಯವ ‘ಪ್ರಕಾಶ್ ರಾಜ್ ಗೋಬ್ಯಾಕ್’ ಎಂದು ಘೋಷಣೆ ಕೂಗಿದ್ದಲ್ಲದೆ, ಅವರ ಭಾವಚಿತ್ರಕ್ಕೆ ಮಸಿ ಬಳಿದು ಆಕ್ರೋಶ ಹೊರಹಾಕಿದರು. ಕೆಲ ಕಾರ್ಯಕರ್ತರು ಸಭಾಂಗಣ ಮತ್ತು ವೇದಿಕೆ ಬಳಿ ನುಗ್ಗಲು ಯತ್ನಿಸಿದರು. ಇದಕ್ಕೆ ಪ್ರತಿಯಾಗಿ ಸಮುದಾಯ ಸಂಘಟನೆಯ ಸದಸ್ಯರು ‘ಆರ್‌ಎಸ್‌ಎಸ್ ಗೋಬ್ಯಾಕ್’ ಎಂದು ಧಿಕ್ಕಾರ…
ಮಂಗಳೂರು: ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತಮ್ಮನೇ ಅಣ್ಣನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಗರದ ಬಿಜೈ-ಕೊಟ್ಟಾರ ಕ್ರಾಸ್ ಬಳಿ ಆ.30ರ ರಾತ್ರಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಅಡಿವೆಪ್ಪ (40) ಮೃತಪಟ್ಟಿದ್ದು, ಅವರ ತಮ್ಮ ರಾಜು (36) ಕೊಲೆ ಆರೋಪಿಯಾಗಿದ್ದಾನೆ. ಅಡಿವೆಪ್ಪ ಮತ್ತು ರಾಜು ತಮ್ಮ ತಾಯಿಯೊಂದಿಗೆ ಕೊಟ್ಟಾರ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಸುಮಾರು ಒಂದು ವರ್ಷದಿಂದ ವಾಸವಾಗಿದ್ದರು. ತಾಯಿ ಗೂಡಂಗಡಿ ನಡೆಸುತ್ತಿದ್ದು, ಇಬ್ಬರು ಸಹೋದರರು ಕೂಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರೂ ವಿಪರೀತ ಮದ್ಯಸೇವನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಪತ್ನಿಯರು ಪ್ರತ್ಯೇಕವಾಗಿ ವಾಸವಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೊಬೈಲ್ ಫೋನ್ ವಿಚಾರಕ್ಕೆ ಆರಂಭವಾಗಿದ್ದ ಜಗಳ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಆ.30ರಂದು ಸಂಜೆ ಸುಮಾರು 6 ಗಂಟೆಗೆ ತಾಯಿ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಅಡಿವೆಪ್ಪ ಮತ್ತು ರಾಜು ಮದ್ಯ ಸೇವಿಸಿ ಅಲ್ಲಿಗೆ ಬಂದಿದ್ದರು. ಈ ವೇಳೆ ಅಡಿವೆಪ್ಪ, ರಾಜುವಿನ ಮೊಬೈಲ್ ಫೋನ್…
ಒಂದೇ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸಿಸುತ್ತಿದ್ದ ಕೇರಳ ಮೂಲದ ಇಬ್ಬರು ಮಲಯಾಳಿ ಮಹಿಳೆಯರನ್ನು ಅವರ ಆಪ್ತ ಗೆಳತಿಯೇ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಗಸ್ಟ್ 28 ರಂದು ನಡೆದಿದೆ. ತ್ರಿಶೂರ್‌ನ ಮನ್ನುತ್ತಿ ಮುಡಿಕ್ಕೋಡ್‌ನ ಅಂಜನಾ ಹರಿ (35) ಹಾಗೂ ತಿರುವನಂತಪುರಂ ಕೇಶವದಾಸಪುರಂನ ಆನ್ ಮೇರಿ ಮ್ಯಾಥ್ಯೂ (40) ಕೊಲೆಯಾದ ದುರ್ದೈವಿಗಳು. ಕೊಲೆ ಆರೋಪದ ಮೇಲೆ ಅವರೊಟ್ಟಿಗೆ ಆಪ್ತವಾಗಿದ್ದ ಕೊಟ್ಟಾಯಂ ಮೂಲದ ಅನಿಲಾ (32) ಎಂಬಾಕೆಯನ್ನು ಮಿಲ್ಪಿಟಾಸ್ ಪೊಲೀಸರು ಬಂಧಿಸಿದ್ದಾರೆ. ಕ್ಯಾಲಿಫೋರ್ನಿಯಾ ಅಮೆರಿಕದ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿ ಅಂಜನಾ, ಆನ್ ಮೇರಿ ಹಾಗೂ ಆರೋಪಿ ಅನಿಲಾ ಮೂವರೂ ಮಿಲ್ ಕ್ರೀಕ್ ಅಪಾರ್ಟ್‌ಮೆಂಟ್‌ಗಳಲ್ಲೇ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಘಟನೆಗೆ ಹಿಂದಿನ ದಿನವಷ್ಟೇ ಮೂವರೂ ಒಟ್ಟಿಗೆ ಓಣಂ ಹಬ್ಬವನ್ನು ಆಚರಿಸಿ, ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಆದರೆ ಕೊಲೆಗೆ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಆಗಸ್ಟ್ 28 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ…
ಮಂಗಳೂರು : ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ತಮ್ಮನೇ ಚಾಕುವಿನಿಂದ ಇರಿದು ಸ್ವಂತ ಅಣ್ಣನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಂಗಳೂರಿನ ಬಿಜೈ ಕೊಟ್ಟಾರ ಕ್ರಾಸ್ ಬಳಿ ರವಿವಾರ (ಆಗಸ್ಟ್ 30) ತಡರಾತ್ರಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಅಡಿವೆಪ್ಪ (40) ಕೊಲೆಯಾದ ದುರ್ದೈವಿ. ಈತನ ತಮ್ಮ ರಾಜು (36) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಅಡಿವೆಪ್ಪ ಹಾಗೂ ರಾಜು ತಮ್ಮ ತಾಯಿಯೊಂದಿಗೆ ಕೊಟ್ಟಾರ ಕ್ರಾಸ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಾಯಿ ಸಣ್ಣ ಗೂಡಂಗಡಿ ನಡೆಸುತ್ತಿದ್ದರೆ, ಇಬ್ಬರು ಸಹೋದರರು ಕೂಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರಿಗೂ ವಿಪರೀತ ಕುಡಿತದ ಚಟವಿತ್ತು ಎನ್ನಲಾಗಿದೆ. ರವಿವಾರ ರಾತ್ರಿ 10:30 ರಿಂದ 11 ಗಂಟೆಯ ನಡುವೆ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ಪ್ರಾರಂಭವಾಗಿದೆ. ಈ ವೇಳೆ ರೊಚ್ಚಿಗೆದ್ದ ತಮ್ಮ ರಾಜು, ಅಣ್ಣ ಅಡಿವೆಪ್ಪನಿಗೆ ಚಾಕುವಿನಿಂದ ಇರಿದಿದ್ದಾನೆ. ತಾಯಿ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಬಂದು ನೋಡಿದಾಗ ಅಡಿವೆಪ್ಪ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ…
ಬೆಂಗಳೂರು: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮೈದುಕೂರು ಠಾಣೆ ಪೊಲೀಸರು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ (ಆರ್.ಆರ್.ನಗರ) ಉದ್ಯಮಿ ಹಾಗೂ ಪ್ರಭಾವಿ ಬಿಜೆಪಿ ಮುಖಂಡ ರವಿಪ್ರಕಾಶ್ ಅವರನ್ನು ನಿನ್ನೆ (ಆ.30) ವಶಕ್ಕೆ ಪಡೆದು ಕರೆದೊಯ್ದಿದ್ದಾರೆ ಎನ್ನಲಾಗಿದೆ. ಆದರೆ ಬಂಧಿಸಲೆಂದು ಬಂದವರು ಪೊಲೀಸರೇ ಅಲ್ಲ, ಮೈದುಕೂರು ಶಾಸಕನ ಕಡೆಯವರೆಂದು ಉದ್ಯಮಿಯ ಕುಟುಂಬ ಆರೋಪಿಸಿದೆ. ಈ ಹಿನ್ನೆಲೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಶಾಸಕರು ಸೇರಿಂದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ. ಬಂಧನವಲ್ಲ, ಕಿಡ್ನ್ಯಾಪ್! ರವಿಪ್ರಕಾಶ್ 300ಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಸಂಗ್ರಹ ಹೊಂದಿರುವ ಖ್ಯಾತ ಉದ್ಯಮಿಯಾಗಿದ್ದಾರೆ. ಮೈದುಕೂರು ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ರವಿಪ್ರಕಾಶ್ 5ನೇ ಆರೋಪಿಯಾಗಿದ್ದು, ಅದರನ್ವಯ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆನ್ನಲಾಗಿದೆ. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಉದ್ಯಮಿಯನ್ನು ಕರೆದೊಯ್ಯಲಾಗಿದ್ದು, ಇದರ ಹಿಂದೆ ಆಂಧ್ರಪ್ರದೇಶದ ಮೈದುಕೂರು ಶಾಸಕ ಹಾಗೂ ಟಿಟಿಡಿ ಮಾಜಿ ಅಧ್ಯಕ್ಷ ಪುಟ್ಟ ಸುಧಾಕರ್ ಅವರ ರಾಜಕೀಯ ಪ್ರಭಾವವಿದೆ ಎಂದು ರವಿಪ್ರಕಾಶ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.…
ಬೆಳ್ತಂಗಡಿ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬೆಳ್ತಂಗಡಿ ಠಾಣಾ ಪೊಲೀಸರು ಆ.29ರಂದು ದಸ್ತಗಿರಿ ಮಾಡಿದ್ದಾರೆ. ಕೇರಳ ಕಣ್ಣೂರು ನಿವಾಸಿ ಡೆನ್ನಿ ಜೋಸೆಫ್ ಅಲಿಯಾಸ್ ಆಂಟೋನಿ ಬಂಧಿತ ಆರೋಪಿ. ಆರೋಪಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ:172/2014, ಕಲಂ: 354(B), 323, 324, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣ ಸಂಬಂಧ ಆರೋಪಿಯು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿಯನ್ನು ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪಿಸಿ ಮುನಿಯ ನಾಯ್ಕ, ಪಿಸಿ ಮನು ನಾಯ್ಕ ಅವರು ಆ. 29ರಂದು ಕೇರಳದ ಕಣ್ಣೂರಿನಲ್ಲಿ ದಸ್ತಗಿರಿ ಮಾಡಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



