Author: admin
ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಬಯೋಮೆಡಿಕಲ್ ಎಂಜಿನಿಯರ್ ಹಾಗೂ ಕುಚಿಪುಡಿ ನರ್ತಕಿ ಸಾಧನಾ ಗೊಲ್ಲಪೂಡಿ ಎಂಬುವರ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (ಟ್ವಿಟರ್) ವೀಸಾ ವಂಚನೆ ನಡೆಸಿದ್ದಾರೆ ಎಂದು ಮಾಡಲಾಗಿದ್ದ ಆರೋಪ ಭಾರೀ ಸದ್ದು ಮಾಡಿತ್ತು. ಆದರೆ, ಇದೀಗ ಅಮೆರಿಕದ ಹೂಸ್ಟನ್ ನಗರದ ಯುಎಸ್ ಅಟಾರ್ನಿ ಏರಾನ್ ರೈಟ್ಜ್ ಸ್ವತಃ ಸ್ಪಷ್ಟನೆ ನೀಡಿದ್ದು, “ಸಾಧನಾ ಅವರು ಅಮೆರಿಕದ ಅಧಿಕೃತ ಪೌರತ್ವ ಹೊಂದಿರುವ ಪ್ರಜೆ ” ಎಂದು ತಿಳಿಸುವ ಮೂಲಕ ಸುಳ್ಳು ಆರೋಪಗಳಿಗೆ ತೆರೆ ಎಳೆದಿದ್ದಾರೆ. ಘಟನೆಯಿಂದ ತೀವ್ರ ಮನನೊಂದಿರುವ ಸಾಧನಾ ಗೊಲ್ಲಪೂಡಿ ಅವರು ತಮ್ಮ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿರುವ ಖಾತೆಗಳ ವಿರುದ್ಧ ದೂರು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಘಟನೆಯ ಹಿನ್ನೆಲೆ: ಜುಲೈ 30 ರಂದು ‘CyberGreen09’ ಎಂಬ ಎಕ್ಸ್ ಖಾತೆಯು ಸಾಧನಾ ಅವರ ಕುಚಿಪುಡಿ ನೃತ್ಯದ ವೀಡಿಯೊವನ್ನು ಹಂಚಿಕೊಂಡು, “2014 ರಿಂದ ಇವರು F-1 ವಿದ್ಯಾರ್ಥಿ ವೀಸಾ ಕಾಯ್ದುಕೊಳ್ಳಲು ಒಂದಾದ ಮೇಲೊಂದರಂತೆ ಕೋರ್ಸ್‌ಗಳಿಗೆ ಸೇರುತ್ತಿದ್ದಾರೆ. ವೀಸಾ ನಿಯಮಗಳನ್ನು…
ನವದೆಹಲಿ: ಭಾರತದ ಆರ್ಥಿಕತೆ ಸದ್ಯ ಇತರ ದೇಶಗಳಿಗಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿದೆ. 2047ಕ್ಕೆ ಮುಂದುವರಿದ ದೇಶವಾಗುವ ಕನಸು ನನಸಾಗುತ್ತದೋ ಇಲ್ಲವೋ, ಆದರೆ ಭಾರತವು ಅಷ್ಟರೊಳಗೆ ವೃದ್ಧಾಪ್ಯಕ್ಕೆ ಕಾಲಿಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, 2050ರ ವೇಳೆಗೆ ದೇಶದ ಸುಮಾರು 70% ಹಿರಿಯ ನಾಗರಿಕರು ಗ್ರಾಮೀಣ ಭಾಗದಲ್ಲೇ ವಾಸಿಸಲಿದ್ದಾರೆ. ಪ್ರತೀ ಐವರಲ್ಲಿ ಒಬ್ಬರು ಹಿರಿಯ ನಾಗರಿಕರಿರಲಿದ್ದಾರಂತೆ. ಟ್ರಾನ್ಸ್ಫಾರ್ಮ್ ರೂರಲ್ ಇಂಡಿಯಾ ಶುಕ್ರವಾರ ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ಈ ಕೆಲ ಕುತೂಹಲಕಾರಿಯಾದ ಮತ್ತು ಆಘಾತಕಾರಿ ಎನಿಸುವ ಸಂಗತಿಗಳಿವೆ. 2050ರ ವೇಳೆಗೆ ಭಾರತದಲ್ಲಿ 34.7 ಕೋಟಿ ಜನರು ವೃದ್ಧರಾಗಿರುತ್ತಾರೆ. ಅಂದರೆ, ಅವರ ವಯಸ್ಸು 60 ವರ್ಷ ದಾಟಿರುತ್ತದೆ. ಅಂದಿನ ಜನಸಂಖ್ಯೆಯ ಶೇ. 20ರಷ್ಟು ಮಂದಿ ವೃದ್ಧರಿರುತ್ತಾರೆ. ಈ ವೃದ್ಧರಲ್ಲಿ ಬಹುತೇಕ ಮುಕ್ಕಾಲು ಭಾಗದಷ್ಟು ಜನರು ಗ್ರಾಮೀಣ ಭಾಗದಲ್ಲಿರುತ್ತಾರೆ ಎಂದು ಈ ವರದಿ ಹೇಳುತ್ತದೆ. ಧನಿಕರಾಗುವ ಮೊದಲೇ ವೃದ್ಧಾಪ್ಯ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಜನಸಂಖ್ಯೆ ವಯಸ್ಸಾಗುವ ಮುನ್ನವೇ ಆರ್ಥಿಕವಾಗಿ ಸಮೃದ್ಧಿ ಸಾಧಿಸಿದ್ದವು. ಆದರೆ…
ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಡೇವಿಡ್ ಡಿಸೋಜ ಅವರನ್ನು ಶುಕ್ರವಾರ ಗುಂಡಿಕ್ಕೆ ಹತ್ಯೆಗೈದಿರುವುದು ಉತ್ತರ ಭಾರತದ ಸುಪಾರಿ ಕಿಲ್ಲರ್ ಗಳು ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಣಕಾಸಿನ ವಿಚಾರವಾಗಿ ಡೇವಿಡ್ ಡಿಸೋಜ ಅವರನ್ನು ಹತ್ಯೆಗೈಯ್ಯಲು ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರದ ಶಾರ್ಪ್ ಶೂಟರ್ ಗಳಿಗೆ ಸುಪಾರಿ ನೀಡಲಾಗಿತ್ತು. ಅದರಂತೆ ಮೂವರ ತಂಡ ಮುದರಂಗಡಿಗೆ ಆಗಮಿಸಿ ಈ ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸಿದೆ. ಈ ಕುರಿತು ಮಿಂಚಿನ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸರು ಆರೋಪಿಗಳನ್ನು ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಶಿರೂರು ಸಮೀಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಒಬ್ಬಾತನನ್ನು ರಾಜು ಎಂದು ಗುರುತಿಸಲಾಗಿದ್ದು ಉಳಿದವರು ಹಲವು ರೀತಿಯ ನಕಲಿ ಗುರುತಿನ ಚೀಟಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇವರೆಲ್ಲರ ಹೆಸರು ಇನ್ನಷ್ಟೇ ಸ್ಪಷ್ಟವಾಗಿ ತಿಳಿದು ಬರಬೇಕಾಗಿದೆ. ಇದೀಗ ಪೊಲೀಸರು ಹತ್ಯೆಗೆ ಸುಪಾರಿ ನೀಡಿದ ಪ್ರಮುಖ ಆರೋಪಿಗಳ ಪತ್ತೆಗಾಗಿ…
ಚಿಕ್ಕಮಗಳೂರು: ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದ ಬಳಿ ಅಪಾಯಕಾರಿ ರಸ್ತೆ ತಿರುವಿನಲ್ಲಿ ಲಾರಿಯನ್ನು ನಿಲ್ಲಿಸಿ ಕೀ ಸಮೇತ ಚಾಲಕ ನಾಪತ್ತೆಯಾಗಿದ್ದಾನೆ. ಪರಿಣಾಮ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಕಳಸದಿಂದ ಮಂಗಳೂರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಅಪಾಯಕಾರಿ ತಿರುವಿನಲ್ಲಿ ಲಾರಿ ಚಾಲಕ ಲಾರಿ ನಿಲ್ಲಿಸಿ ಕೀ ಸಮೇತ ನಾಪತ್ತೆಯಾಗಿದ್ದಾನೆ. ಇದರಿಂದ ಸುರಿಯುತ್ತಿರುವ ಮಳೆ ಮಧ್ಯೆ ರಸ್ತೆಯ ಎರಡು ಕಡೆಗಳಲ್ಲಿ ಕಿ.ಮೀ.ಗಟ್ಟಲೇ ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು ಲಾರಿ ಚಾಲಕ ಲಾರಿಯ ಮಾಲೀಕನ ಬಳಿ 6 ಸಾವಿರ ರೂ. ಹಣ ಹಾಕಿಸಿಕೊಂಡು ರಸ್ತೆ ಮಧ್ಯೆಯೇ ಲಾರಿ ಬಿಟ್ಟು ಓಡಿಹೋಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಕುದುರೆಮುಖ ಪೊಲೀಸರು ಲಾರಿಯನ್ನು ತೆಗೆಯಲಾಗದೆ ಮಾಲೀಕನಿಗೆ ಕರೆ ಮಾಡಿ ಕೂಡಲೇ ಬೇರೆ ಚಾಲಕರನ್ನ ಕಳುಹಿಸುವಂತೆ ಸೂಚನೆ ನೀಡಿದ್ದಾರೆ. ಲಾರಿ ಚಾಲಕನಿಗಾಗಿ ಕುದುರೆಮುಖ ಪೊಲೀಸರು ಶೋಧ ನಡೆಸಿದ್ದಾರೆ. ಆದರೆ, ಲಾರಿ ಚಾಲಕ ಪತ್ತೆಯಾಗಿಲ್ಲ. ಕಳಸ – ಕುದುರೆಮುಖ ಮಾರ್ಗದಲ್ಲಿ ಮೂರು ಅಪಾಯಕಾರಿ ಹಳೆಯ ಸೇತುವೆಗಳಿವೆ. ಭಾರಿ ಪ್ರಮಾಣದ ಭಾರ ಹೊತ್ತಿರುವ…
ಕೊಟ್ಟಿಗೆಹಾರ : ವಿಲ್ಪುರಂ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಟ್ಟಿಗೆಹಾರದಲ್ಲಿ ಶನಿವಾರ (ಆಗಸ್ಟ್ 8) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಳಿಲ್ ಗದ್ದೆ ಗ್ರಾಮದ ನಿವಾಸಿಗಳಾದ ಜ್ಞಾನೇಶ, ಮೋಹನ ಹಾಗೂ ಗುರುಕಿರಣ್ ಮೃತಪಟ್ಟ ದುರದೃಷ್ಟಕರ ಯುವಕರು. ಕಾರಿನಲ್ಲಿದ್ದ ಪ್ರೇಮ್ ಹಾಗೂ ಹೃತಿಕ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮತ್ತು ಗಾಯಾಳುಗಳು ತುಮಕೂರಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ದರ್ಶನಕ್ಕಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಮುಂಭಾಗ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಹಿಂಬದಿಯಿಂದ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಭೀಕರ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ಭೀಕರ ಶಬ್ದ ಕೇಳುತ್ತಿದ್ದಂತೆಯೇ ಸ್ಥಳೀಯ ಸಾರ್ವಜನಿಕರು ತಕ್ಷಣ…
ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಪ್ರಿನ್ಸ್ ಡೇವಿಡ್ ಡಿಸೋಜಾ ಅವರ ಮೇಲೆ ನಡೆದ ಭೀಕರ ಗುಂಡಿನ ದಾಳಿ ಇದೀಗ ಕೊಲೆ ಪ್ರಕರಣವಾಗಿ ತನಿಖೆಯ ಹಾದಿ ಹಿಡಿದಿದೆ. ಹಾಡಹಗಲೇ ನಡೆದ ಈ ಶೂಟೌಟ್ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪ್ರಕರಣದ ಹಿಂದೆ ಇರುವ ನಿಖರ ಕಾರಣ ಮತ್ತು ಆರೋಪಿಗಳ ಜಾಲದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುಪಿ ಮೂಲದ ಶೂಟರ್ ರಾಜು ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಪ್ರಕರಣದ ಹಿಂದೆ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇದೇ ವೇಳೆ ಡೇವಿಡ್ ಡಿಸೋಜಾ ಹತ್ಯೆಯ ಹಿಂದೆ ಮುಂಬೈ ಮೂಲದ ಶೂಟರ್‌ಗಳ ಕೈವಾಡವಿದೆಯೇ ಎಂಬ ಅನುಮಾನವೂ ತನಿಖೆಯ ಪ್ರಮುಖ ಅಂಶವಾಗಿದೆ. ಪಡುಬಿದ್ರೆ ಪವರ್ ಪ್ರಾಜೆಕ್ಟ್‌ನ ಟೆಂಡರ್ ವಿಚಾರವೂ ಪ್ರಕರಣದ ಹಿಂದಿನ ಪ್ರಮುಖ ಕಾರಣವಾಗಿರಬಹುದೇ ಎಂಬ ಕೋನದಲ್ಲಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಡೇವಿಡ್ ಡಿಸೋಜಾ ಅವರು ಈ ಭಾಗದ ರಾಜಕೀಯ…
ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮುದುರಂಗಡಿ ಪೇಟೆಯಲ್ಲಿ ಹಾಡಹಗಲೇ ನಡೆದ ಡೇವಿಡ್ ಡಿಸೋಜ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣದ ಆರೋಪಿ ರಾಜುನನ್ನು ಕಾಪು ಪಿಎಸ್‌ಐ ತೇಜಸ್ವಿ ಹಾಗೂ ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ನೇತೃತ್ವದ ತಂಡ ಬಂಧಿಸಿ ಕರೆತರುತ್ತಿದ್ದ ವೇಳೆ, ಬೈಂದೂರು ಸಮೀಪದ ಒತ್ತಿನೆಣೆ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಆರೋಪಿ ಪರಾರಿಯಾಗುವುದನ್ನು ತಡೆಯಲು ಕಾಪು ಪಿಎಸ್‌ಐ ತೇಜಸ್ವಿ ಅವರು ಸರ್ವೀಸ್ ಪಿಸ್ತೂಲಿನಿಂದ ರಾಜುವಿನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಪಿಎಸ್‌ಐ ತೇಜಸ್ವಿ ಅವರಿಗೂ ಗಾಯವಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿ ತೇಜಸ್ವಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಮಂಗಳೂರು: ಸಹಸ್ರಾರು ವರ್ಷಗಳ ಇತಿಹಾಸವಿರುವ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರ, ಕೊಡಿಯಾಲ್ ಬೈಲ್‌ನ ಭಂಡಾರ ಗುಡಿ ಹಾಗೂ ನೂತನ ಕಟ್ಟಡಕ್ಕೆ 9 ಲಕ್ಷ ಮೌಲ್ಯದ 58.5 KVA ಜನರೇಟರ್ ಮತ್ತು ಪ್ಯಾನೆಲ್ ವ್ಯವಸ್ಥೆಯ ದಾನಿಗಳದ ಲೋಕೇಶ್ ಬೋಳಾರ್ ದಂಪತಿಯಿಂದ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 7, 2026ರಂದು ನಡೆಯಿತು. ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೋಶಾಧಿಕಾರಿಯಾಗಿರುವ PMJF Ln ಶ್ರೀ ಲೋಕೇಶ್ ಬೋಳಾರ್ ಹಾಗೂ ಅವರ ಪತ್ನಿ ಶ್ರೀಮತಿ ಜಯಶ್ರೀ ಲೋಕೇಶ್ಅವರು ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ 9 ಲಕ್ಷ ಮೌಲ್ಯದ ಜನರೇಟರ್ ಮತ್ತು ಪ್ಯಾನೆಲ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಆಚಾರ ಪಟ್ಟವರು ಮತ್ತು ಗುರಿಕಾರರು, ಅಧ್ಯಕ್ಷರಾದ ಶ್ರೀ ಗಣೇಶ್ ಕುಂಟಲ್ಪಾಡಿ, ಆಡಳಿತ ಮೊಕ್ತೇಸರರಾದ ವಿಶ್ವನಾಥ್ ಮಂಕಿಸ್ಟ್ಯಾಂಡ್, ಕಾರ್ಯದರ್ಶಿ ಸುಧೀರ್ ಬಿ ಜಪ್ಪು, ಮೊಕ್ತೇಸರರಾದ ಸುಜನ್ ದಾಸ್ ಕುಡುಪು, ರವೀಂದ್ರ ಕೆ, ಶ್ರೀಮತಿ ಉಷಾ ಪ್ರಭಾಕರ್, ಸರಳ ನಾಗೇಶ್ ಮಹಿಳಾ ಸಮಿತಿ…
ಉಡುಪಿ: ಉದ್ಯಮಿ, ಮುಖಂಡ ಡೇವಿಡ್ ಡಿ’ಸೋಜಾ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಮುದರಂಗಡಿಯಲ್ಲಿ ಶುಕ್ರವಾರ ನಡೆದಿದೆ. ಶಿರ್ವಾ ಪ್ರದೇಶದ ಖ್ಯಾತ ಉದ್ಯಮಿ ಡೇವಿಡ್ ಡಿ’ಸೋಜಾ ಅವರು ಯಶಸ್ವಿ ಅರ್ಥ್ಮೂವರ್ಸ್ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದು, ಸ್ಥಳೀಯವಾಗಿ ಪರಿಚಿತ ವ್ಯಕ್ತಿಯಾಗಿದ್ದಾರೆ. ದಾಳಿಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಲ್ಲದೆ, ಗಾಯಗೊಂಡಿರುವ ಡೇವಿಡ್ ಡಿ’ಸೋಜಾ ಅವರ ಆರೋಗ್ಯ ಸ್ಥಿತಿಯ ಬಗ್ಗೆಯೂ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಘಟನೆಯ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ದಾಳಿ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
ಉಡುಪಿ: ಮಣಿಪಾಲದ ಈಶ್ವರ ನಗರ ಬಳಿಯ ರಾಷ್ಟ್ರೀಯ ಹೆದ್ದಾರಿ 169A ರ ಇಳಿಜಾರಿನಲ್ಲಿ ಗುರುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾ ಪಲ್ಟಿಯಾದ ಘಟನೆ ಉಡುಪಿ ನಗರ ಪುರಸಭೆಯ ಕುಡಿಯುವ ನೀರಿನ ಪಂಪ್ ಹೌಸ್ ಮುಂದೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆದ್ದಾರಿಯಲ್ಲಿ ತೀಕ್ಷ್ಣವಾದ ತಿರುವಿನಲ್ಲಿ ಮಾತುಕತೆ ನಡೆಸುವಾಗ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಮುಖ್ಯ ರಸ್ತೆಯಲ್ಲಿನ ಏಕಾಏಕಿ ತಿರುವು ಈ ಪ್ರದೇಶದಲ್ಲಿ ಹಲವಾರು ಅಪಘಾತಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇಳಿಜಾರು ಮತ್ತು ತೀಕ್ಷ್ಣವಾದ ತಿರುವುಗಳಿಂದಾಗಿ ವಾಹನ ಸವಾರರು ಸುರಕ್ಷಿತವಾಗಿ ಸಂಚರಿಸಲು ಕಷ್ಟವಾಗುತ್ತಿದೆ ಎಂದು ವರದಿಯಾಗಿದೆ. ಕಡಿದಾದ ಇಳಿಜಾರಿನ ಕಾರಣದಿಂದಾಗಿ ಎಚ್ಚರಿಕೆ ಫಲಕಗಳು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಆರೋಪ. ಘಟನೆ ಕುರಿತು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



