Author: admin
ಬರ್ಲಿನ್ : ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ತೆರಳಿದ್ದ ಮಂಗಳೂರು ಮೂಲದ 21 ವರ್ಷದ ವಿದ್ಯಾರ್ಥಿಯೊಬ್ಬ ಸ್ನೇಹಿತರೊಂದಿಗೆ ಚಾರಣ ಮುಗಿಸಿ ವಿಹಾರಕ್ಕೆ ತೆರಳಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಲೀಪ್‌ಜಿಗ್ ಪ್ರಾಂತ್ಯದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಜರ್ಮನಿಯ ಸ್ಥಳೀಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮೃತನ ಜೊತೆಯಲ್ಲಿದ್ದ ಇಬ್ಬರು ಭಾರತೀಯರು ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರಿನ ಮರಕಡ-ಕುಂಜತ್‌ಬೈಲ್ ನಿವಾಸಿ ಮೊಹಮ್ಮದ್ ಅನಿಜ್ ಅಬೂಬಕ್ಕರ್ (21) ಮೃತಪಟ್ಟ ದುರ್ದೈವಿ ವಿದ್ಯಾರ್ಥಿ. ಈತ ಜರ್ಮನಿಯ ಹಾಲೆಯ ರಹ್ನ್ ಶಿಕ್ಷಣ ಸಂಸ್ಥೆಯಲ್ಲಿ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA) ಪದವಿಯ ಮೂರನೇ ಸೆಮಿಸ್ಟರ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಪೊಲೀಸ್ ಹಾಗೂ ರಾಯಭಾರ ಕಚೇರಿಯ ಮೂಲಗಳ ಪ್ರಕಾರ, ಗುರುವಾರ (ಜೂನ್ 2) ಬೆಳಗ್ಗೆ ಅನಿಜ್ ತನ್ನ ಸಹಪಾಠಿಗಳೊಂದಿಗೆ ಸೇರಿ ಲೀಪ್‌ಜಿಗ್ ಪ್ರಾಂತ್ಯದ ಬಳಿ ಟ್ರಕ್ಕಿಂಗ್ (ಚಾರಣ) ಮಾಡಲು ಹೊರಟಿದ್ದ. ಚಾರಣ ಮುಗಿದ ಬಳಿಕ ಈತ ಹಾಗೂ ಸ್ನೇಹಿತರು ಜೊತೆಗೂಡಿ ಲೀಪ್‌ಜಿಗ್‌ನ ‘ರೆಡ್ ಬುಲ್ ಅರೆನಾ’ ಕ್ರೀಡಾಂಗಣದ…
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 5ನೇ ತಿರುವಿನಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬುಡಮೇಲಾಗಿ ಬಿದ್ದ ಘಟನೆ ಜುಲೈ 4ರಂದು ನಡೆದಿದೆ. ಅದೃಷ್ಟವಶಾತ್ ಅದರಲ್ಲಿ ಪ್ರಯಾಣಿಸುತ್ತಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಯ ನಡುವೆ ಈ ಘಟನೆ ಸಂಭವಿಸಿದೆ. ಘಾಟಿ ರಸ್ತೆಯಲ್ಲಿ ಕಾರು ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಬೃಹತ್ ಮರವು ಕಾರಿನ ಮೇಲೆ ಅಡ್ಡಲಾಗಿ ಬಿದ್ದಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್, ಸಂಭವನೀಯ ಭೀಕರ ದುರಂತದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಮರವು ರಸ್ತೆಯ ಮಧ್ಯಭಾಗದಲ್ಲಿ ಅಡ್ಡಲಾಗಿ ಬಿದ್ದಿದ್ದರಿಂದ, ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದಾಗಿ ಹೆದ್ದಾರಿಯ ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು. ತದನಂತರ ವಾಹನ ಸಂಚಾರವನ್ನು…
ಕರೀಂನಗರ: ಆನ್‌ಲೈನ್ ಜೂಜಾಟ ಹಾಗೂ ಲಾಟರಿ ಆ್ಯಪ್‌ಗಳ ವ್ಯಸನಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡು, ಸಾಲದ ಅಪ್ಲಿಕೇಶನ್‌ಗಳ ಏಜೆಂಟರ ಕಿರುಕುಳ ತಾಳಲಾರದೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕೂಲಿ ಮಹಿಳೆಯೊಬ್ಬರನ್ನು ಅಪಹರಿಸಿ, ಅವರ ಚಿನ್ನಾಭರಣ ದೋಚಿ, ಸಾಕ್ಷಿ ನಾಶಕ್ಕಾಗಿ ಕೃಷಿ ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ 21 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಕರೀಂನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೊಲ್ಲಪಲ್ಲಿ ಗ್ರಾಮದ ದ್ವಿತೀಯ ವರ್ಷದ ಪದವಿ (Degree) ವಿದ್ಯಾರ್ಥಿ ಧಮ್ಮ ದಿನೇಶ್ ರೆಡ್ಡಿ (21) ಬಂಧಿತ ಭೀಕರ ಅಪರಾಧಿ. ಕರೀಂನಗರ ಟವರ್ ಸರ್ಕಲ್ ಲೇಬರ್ ಅಡ್ಡಾದಲ್ಲಿ ಕೂಲಿ ಕೆಲಸಕ್ಕಾಗಿ ಕಾಯುತ್ತಿದ್ದ ಗಂಗಾಧರ ಲಕ್ಷ್ಮಿ (55) ಎಂಬ ಮಹಿಳೆ ಈ ಜೂಜುಕೋರನ ಕ್ರೌರ್ಯಕ್ಕೆ ಬಲಿಯಾದ ದುರ್ದೈವಿ. ಜುಲೈ 1, 2026 ರಂದು ಬೆಳಿಗ್ಗೆ 10 ಗಂಟೆಗೆ ಕರೀಂನಗರ ಟವರ್ ಸರ್ಕಲ್‌ನಿಂದ ಗಂಗಾಧರ ಲಕ್ಷ್ಮಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕರೀಂನಗರ-3 ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ವೇಳೆ ಮಹಿಳೆಯನ್ನು ಅಪಹರಿಸಿ, ದರೋಡೆ…
ಉಡುಪಿ : ಉಡುಪಿ ನಗರದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕೆಮ್ಮಣ್ಣು-ಹೂಡೆ ಮಾರ್ಗದ ಖಾಸಗಿ ಬಸ್ಸುಗಳ ನಡುವೆ ಟೈಮಿಂಗ್ಸ್ ವಿಚಾರವಾಗಿ ತೀವ್ರ ಜಟಾಪಟಿ ನಡೆದಿದ್ದು, ಮುಂಡಿನ ಬಸ್ಸಿಗೆ ಉದ್ದೇಶಪೂರ್ವಕವಾಗಿಯೇ ಎರಡು ಬಾರಿ ಢಿಕ್ಕಿ ಹೊಡೆದು ಜಖಂಗೊಳಿಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಸಾರ್ವಜನಿಕ/ಖಾಸಗಿ ಆಸ್ತಿ ನಷ್ಟ ಸಂಭವಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಸ್ ಚಾಲಕ ಸಲ್ಮಾನ್ ಮತ್ತು ನಾಲ್ವರು ಸಿಬ್ಬಂದಿಗಳ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಮಲ್ಪೆ ಬಡನಿಡಿಯೂರು ನಿವಾಸಿ, KA-19-D-8000 ನಂಬರಿನ ಬಸ್ ಚಾಲಕ ಕೆ. ವೈಭವ್ ಪೈ (21) ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರಿನ ವಿವರಗಳ ಪ್ರಕಾರ, ದಿನಾಂಕ 04/07/2026 ರಂದು ಶನಿವಾರ ರಾತ್ರಿ 9:15 ರ ಸಮಯಕ್ಕೆ ವೈಭವ್ ಪೈ ಚಾಲಕರಾಗಿದ್ದ ಬಸ್ ಉಡುಪಿಯಿಂದ ಕೆಮ್ಮಣ್ಣು ಹೂಡೆಗೆ ಹೊರಡಲು ನಿಲ್ದಾಣದಲ್ಲಿ ಸಿದ್ಧವಾಗಿ ನಿಂತಿತ್ತು. ಇವರ ಬಸ್ಸಿನ ಮುಂಭಾಗದಲ್ಲಿ…
ವಾಷಿಂಗ್ಟನ್: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತಿಮ ಸಂಸ್ಕಾರದ ವೇಳೆ ಅಲ್ಲಿ ನೆರೆದಿದ್ದ ಇಡೀ ಇರಾನ್ ರಾಜಕೀಯ ಹಾಗೂ ಮಿಲಿಟರಿ ನಾಯಕತ್ವವನ್ನು ಒಂದೇ ದಾಳಿಯಲ್ಲಿ (“ಒನ್ ಶಾಟ್”) ನಿರ್ನಾಮ ಮಾಡುವ ಸುವರ್ಣಾವಕಾಶ ಅಮೆರಿಕಕ್ಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜಾಗತಿಕ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗಿಟ್ಟು ಟ್ರಂಪ್ ನೀಡಿರುವ ಈ ಉದ್ಧಟತನದ ಹೇಳಿಕೆ ಅಂತರರಾಷ್ಟ್ರೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಉದ್ವಿಗ್ನತೆಗೆ ಕಾರಣವಾಗಿದೆ. ಅಮೆರಿಕದ ಪ್ರಸಿದ್ಧ ‘Axios’ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ರಹಸ್ಯ ಬಿಚ್ಚಿಟ್ಟಿರುವ ಟ್ರಂಪ್, ಇರಾನ್‌ನೊಂದಿಗೆ ಪ್ರಸ್ತುತ ನಡೆಯುತ್ತಿರುವ ಸಂಧಾನ ಮಾತುಕತೆಗಳ ಹಿನ್ನೆಲೆಯಲ್ಲಿ ತಾವು ಅಂತಹ ಯಾವುದೇ ಕಠಿಣ ಕ್ರಮಕ್ಕೆ ಮುಂದಾಗಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. “ಖಮೇನಿ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಇರಾನ್‌ನ ಬಹುತೇಕ ಎಲ್ಲಾ ಉನ್ನತ ನಾಯಕರು ಒಂದೇ ಸ್ಥಳದಲ್ಲಿ ಜಮಾಯಿಸಿದ್ದರು. ಅಮೆರಿಕ ಬಯಸಿದ್ದರೆ ಕೇವಲ ಒಂದೇ ಹೊಡೆತದಲ್ಲಿ ಎಲ್ಲರನ್ನೂ ಮುಗಿಸಿಬಿಡಬಹುದಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ಏಕೆಂದರೆ, ಇರಾನ್‌ನ…
ಮಂಗಳೂರು: ಸೂಟರ್ ಪೇಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿಯ ಬಳಿ ಹಿರಿಯ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದು ಪರಾರಿಯಾಗಿರುವ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದಲ್ಲಿ ಉತ್ತರ ಪ್ರದೇಶದ ಮುಝಾಫರ್ ನಗರದ ರವಿ ಬೌರಾ (39) ಮತ್ತು ಗೊಂಡಾ ಜಿಲ್ಲೆ ಕನೀಲ್ ಗಂಝ್, ಶಿಶಾಮೌ ಗ್ರಾಮದ ಮೊಹಮ್ಮದ್ ಸಾಹೀಲ್ ಅಲಿಯಾಸ್ ಸಿದ್ದಿಕಿ (26) ಎಂಬಿಬ್ಬರನ್ನು ಬಂಧಿಸಿ, ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಪ್ರಕರಣ ನಡೆದ ಒಂದು ವಾರದ ಬಳಿಕ ಆರೋಪಿಗಳು ಸ್ಟೇಟ್ ಬ್ಯಾಂಕ್ ನ ರೊಸಾರಿಯೋ ಬಳಿ ಪೊಲೀಸರ ಬಲೆಗೆ ಬಿದ್ದಿದ್ದರು. ಪಾಂಡೇಶ್ವರ ಠಾಣೆ ಪೊಲೀಸರಿಂದ ಆರೋಪಿಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿರುವ ಆರೋಪಿ ಬಾಗಲಕೋಟೆಯ ಅಲ್ತಾಫ್ ಹುಸೈನ್ (40)ನ ಪತ್ತೆಗೆ ತಂಡ ರಚಿಸಿ, ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ ಆತನ ಸುಳಿವು ಇನ್ನೂ ಸಿಕ್ಕಿಲ್ಲ. ಆತನ ಊರಾದ ಬಾಗಲಕೋಟೆಗೆ ಪೊಲೀಸರ ಒಂದು ತಂಡ ಭೇಟಿ…
ಪಡುಬಿದ್ರಿ: ನಡಿಪಟ್ಟಣ ಕರಾವಳಿ ಭಾಗದಲ್ಲಿ ಮರುಕಳಿಸುತ್ತಿರುವ ಸಮುದ್ರ ಕೊರೆತದಿಂದ ಸ್ಥಳೀಯ ನಿವಾಸಿಗಳು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಆ ಪ್ರದೇಶಕ್ಕೆ ಶಾಶ್ವತ ರಕ್ಷಣಾ ವ್ಯವಸ್ಥೆ ಕಲ್ಪಿಸುವಂತೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಆರೋಗ್ಯ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರಿಗೆ ಮನವಿ ಪತ್ರ ಸಲ್ಲಿಸಿ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಮನವಿಯಲ್ಲಿ, ಶ್ರೀ ಪಾಂಡುರಂಗ ಕೋಟ್ಯಾನ್ ಅವರ ಮನೆಯ ಸಮೀಪದಿಂದ ಸಾಗರ ವಿದ್ಯಾ ಮಂದಿರದವರೆಗೆ ಹರಡಿರುವ ಸುಮಾರು 700 ಮೀಟರ್ ಉದ್ದದ ಕರಾವಳಿ ಪ್ರದೇಶವು ಸಮುದ್ರದ ಅಬ್ಬರಕ್ಕೆ ತುತ್ತಾಗುತ್ತಿದ್ದು, ಅಲ್ಲಿ ಶಾಶ್ವತ ಕಡಲ ತಡೆಗೋಡೆ ನಿರ್ಮಾಣ ಮಾಡುವುದು ಅತ್ಯಗತ್ಯವಾಗಿದೆ ಎಂದು ತಿಳಿಸಲಾಗಿದೆ. ಸಮುದ್ರದ ಅಲೆಗಳ ಪ್ರಭಾವದಿಂದ ಭೂ ಕುಸಿತ ಹೆಚ್ಚಾಗುತ್ತಿದ್ದು, ಹಲವು ಮನೆಗಳು ಹಾಗೂ ಸಾರ್ವಜನಿಕ ಸೌಲಭ್ಯಗಳು ಅಪಾಯದ ವಲಯಕ್ಕೆ ಸಿಲುಕಿವೆ. ಇದರ ಪರಿಣಾಮ ಮೀನುಗಾರ ಕುಟುಂಬಗಳು ಆತಂಕದಲ್ಲಿದ್ದು, ಪ್ರತಿ ಮಳೆಗಾಲದಲ್ಲೂ ಪರಿಸ್ಥಿತಿ ಮತ್ತಷ್ಟು…
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ)ಗೆ ಸೇರಿದ ಬಸ್‌ವೊಂದು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಸಂಚರಿಸಿರುವ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಬಸ್‌ನ ಹೆಡ್‌ಲೈಟ್‌ಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಕಂಡಕ್ಟರ್ ಮೊಬೈಲ್‌ನ ಟಾರ್ಚ್ ಬೆಳಗಿದರೆ, ಅದರ ಸಹಾಯದಿಂದ ಚಾಲಕ ಬಸ್ ಚಲಾಯಿಸಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಮಾಹಿತಿಯ ಪ್ರಕಾರ, ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುವ ಈ ಬಸ್‌ನ ಹೆಡ್‌ಲೈಟ್‌ಗಳು ಕಳೆದ 15 ದಿನಗಳಿಂದ ಕೆಟ್ಟು ಹೋಗಿದ್ದರೂ, ಅವುಗಳನ್ನು ದುರಸ್ತಿ ಮಾಡಿಲ್ಲ ಎನ್ನಲಾಗಿದೆ. ಇದರಿಂದ ರಾತ್ರಿ ವೇಳೆ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬಸ್ ಓಡಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಲಬುರಗಿ–ಚಿಂಚೋಳಿ ನಡುವಿನ ಅಂತರ ಸುಮಾರು 90 ಕಿಲೋಮೀಟರ್ ಆಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಬಸ್ ಸಂಚರಿಸಿರುವುದು ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದೆ ಎಂಬ ಆರೋಪ ಕೇಳಿಬಂದಿದೆ. ಹೆಡ್‌ಲೈಟ್ ಇಲ್ಲದೆ ರಾತ್ರಿ ವೇಳೆ ಬಸ್ ಓಡಿಸುವುದು ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದ್ದು, ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ…
ನವದೆಹಲಿ: ಬಿಹಾರ ಮೂಲದ ಯೂಟ್ಯೂಬರ್ ಹಾಗೂ ಪತ್ರಕರ್ತ ಮನೀಷ್ ಕಶ್ಯಪ್ ಅವರು ತಮ್ಮ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರು E20 ಪೆಟ್ರೋಲ್ ಬಳಕೆಯಿಂದ ಹಾನಿಗೊಳಗಾಗಿದೆ ಎಂದು ಮಾಡಿದ್ದ ಆರೋಪವನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಅಧಿಕೃತವಾಗಿ ತಳ್ಳಿಹಾಕಿದೆ. ಕಂಪನಿಯು ಬಿಡುಗಡೆ ಮಾಡಿದ ಸ್ಪಷ್ಟೀಕರಣದಲ್ಲಿ, ಇನ್ನೋವಾ ಹೈಕ್ರಾಸ್ ಕಾರು 20 ಶೇಕಡಾ ಎಥೆನಾಲ್ ಮಿಶ್ರಿತ E20 ಪೆಟ್ರೋಲ್‌ಗೆ ಸಂಪೂರ್ಣ ಹೊಂದಾಣಿಕೆಯಾಗಿದ್ದು, ಅದರ ಬಳಕೆಯಿಂದ ಯಾವುದೇ ಗಂಭೀರ ಎಂಜಿನ್ ಹಾನಿಯಾಗಿಲ್ಲ ಎಂದು ತಿಳಿಸಿದೆ. ಕಾರಿನ ಸಮಸ್ಯೆಗೆ E20 ಪೆಟ್ರೋಲ್ ಕಾರಣವಲ್ಲ, ಬದಲಾಗಿ ಕಲುಷಿತ ಇಂಧನ ಬಳಕೆಯೇ ಕಾರಣ ಎಂದು ಕಂಪನಿ ಸ್ಪಷ್ಟಪಡಿಸಿದೆ. ಮನೀಷ್ ಕಶ್ಯಪ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೊ ವೈರಲ್ ಆದ ನಂತರ ದೇಶಾದ್ಯಂತ E20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಕುರಿತು ಹೊಸ ಚರ್ಚೆ ಆರಂಭವಾಗಿತ್ತು. ವಿಡಿಯೊದಲ್ಲಿ, ತಮ್ಮ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರು ಕೇವಲ 12 ಸಾವಿರ ಕಿಲೋಮೀಟರ್ ಸಂಚರಿಸಿದ ಬಳಿಕ ಎಂಜಿನ್‌ನಲ್ಲಿ ತೀವ್ರ ಕಂಪನ, ನಾಕಿಂಗ್ ಹಾಗೂ ವಾಹನ…
ಅಂಕೋಲಾ : ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಎಸ್ಕಾರ್ಟ್ (ಬೆಂಗಾವಲು) ವಾಹನಕ್ಕೆ ಸ್ಕೂಟಿಯೊಂದು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ವರದರಾಜ್ ಹೋಟೆಲ್ ಸಮೀಪ ನಡೆದಿದೆ. ಅಪಘಾತ ಸಂಭವಿಸಿದ ತಕ್ಷಣವೇ ಸಚಿವರು ವಿವಿಐಪಿ ಪ್ರೋಟೋಕಾಲ್ ಬದಿಗಿಟ್ಟು, ಸ್ವತಃ ಗಾಯಾಳುವನ್ನು ತಮ್ಮದೇ ವಾಹನದಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಾಲ್ಲೂಕಿನ ಅಲಗೇರಿ ಮೂಲದ ನಿವಾಸಿ ಸಂದೀಪ್ ನಾಯಕ್ ಗಂಭೀರವಾಗಿ ಗಾಯಗೊಂಡ ಸ್ಕೂಟಿ ಸವಾರ. ಸಚಿವ ಯು.ಟಿ. ಖಾದರ್ ಅವರು ಕಾರವಾರದಿಂದ ಉಡುಪಿ ಕಡೆಗೆ ಅಧಿಕೃತ ಪ್ರವಾಸ ನಿಮಿತ್ತ ಬೆಂಗಾವಲು ವಾಹನಗಳ ಸರಣಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಅಂಕೋಲಾ ಪಟ್ಟಣದ ವರದರಾಜ್ ಹೋಟೆಲ್ ಆಸುಪಾಸಿನಲ್ಲಿ ಸಚಿವರ ಬೆಂಗಾವಲು ವಾಹನಕ್ಕೆ ಸಂದೀಪ್ ನಾಯಕ್ ಚಲಾಯಿಸುತ್ತಿದ್ದ ಸ್ಕೂಟಿ ಅನಿರೀಕ್ಷಿತವಾಗಿ ಢಿಕ್ಕಿಯಾಗಿದೆ. ಢಿಕ್ಕಿಯ ತೀವ್ರತೆಗೆ ಸವಾರ ಸಂದೀಪ್ ಹೆದ್ದಾರಿಗೆ ಬಿದ್ದು ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ತಮ್ಮ ಬೆಂಗಾವಲು ಪಡೆಗೆ ಅಪಘಾತವಾಗಿರುವುದನ್ನು ಗಮನಿಸಿದ…



