Close Menu
    What's Hot

    ಪುತ್ತೂರು: ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಕೇರಳದ ಆರೋಪಿಯ ಬಂಧನ

    September 4, 2026

    ಸುಮಂತ್ ನಿಗೂಢ ಸಾವು ಪ್ರಕರಣ: ಸಹೋದರ, ಇಬ್ಬರು ಚಿಕ್ಕಪ್ಪನ ಬ್ರೈನ್ ಮ್ಯಾಪಿಂಗ್

    September 4, 2026

    ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್ ಕಳ್ಳತನ: ಉಪ್ಪಿನಂಗಡಿಯಲ್ಲಿ ಇಬ್ಬರ ಬಂಧನ

    September 4, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಟ್ರಕ್‌ಗೆ ಎರ್ಟಿಗಾ ಡಿಕ್ಕಿ; 23 ವರ್ಷದ ಜನಪ್ರಿಯ ಯೂಟ್ಯೂಬರ್ ಹಾಗೂ ತಾಯಿ ದಾರುಣ ಸಾವು
    ರಾಷ್ಟ್ರೀಯ

    ಟ್ರಕ್‌ಗೆ ಎರ್ಟಿಗಾ ಡಿಕ್ಕಿ; 23 ವರ್ಷದ ಜನಪ್ರಿಯ ಯೂಟ್ಯೂಬರ್ ಹಾಗೂ ತಾಯಿ ದಾರುಣ ಸಾವು

    adminBy adminAugust 27, 2026No Comments2 Mins Read

    ಕಾರು ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ  23 ವರ್ಷದ ಯೂಟ್ಯೂಬರ್  ಹಾಗೂ ಆಕೆಯ ತಾಯಿ ಇಬ್ಬರೂ ಮೃತಪಟ್ಟಿರುವ ಘಟನೆ   ಅಗರ್ ಮಾಲ್ವಾ ಜಿಲ್ಲೆಯಲ್ಲಿ ನಡೆದಿದೆ.

    ಅಪಘಾತದಲ್ಲಿ ಯೂಟ್ಯೂಬರ್ ತಂದೆ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿ-ಗರೋತ್ ಹೆದ್ದಾರಿಯ ರಾಮಖೇಡಿ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಅಪಘಾತ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಎರ್ಟಿಗಾ ಕಾರು ಮುಂದೆ ಹೋಗುತ್ತಿದ್ದ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

    ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗುರುತಿಸಲಾಗದಷ್ಟು ಹಾನಿಯಾಗಿದೆ. ಡಿಕ್ಕಿಯ ಬಳಿಕ ಟ್ರಕ್ ಕೂಡ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ರಸ್ತೆಯಿಂದ ಕೆಳಗೆ ಬಿದ್ದಿದೆ ಎಂದು ವರದಿಯಾಗಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್ಗೆ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಲಾಗಿದ್ದು, ಓರ್ವ ಮಹಿಳೆ ಕಾರಿನ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದರಿಂದ ರಕ್ಷಣಾ ಸಿಬ್ಬಂದಿ ಆಕೆಯನ್ನು ಹೊರತೆಗೆದಿದ್ದಾರೆ.

    ತಾಯಿ-ಮಗಳು ಸಾವು:
    ಅಪಘಾತದಲ್ಲಿ ಮೃತಪಟ್ಟವರನ್ನು ಉತ್ತರ ಪ್ರದೇಶದ ನಿವಾಸಿಗಳಾದ 50 ವರ್ಷದ ಸಾರಿಕಾ ಹಾಗೂ ಅವರ 23 ವರ್ಷದ ಪುತ್ರಿ ಛವಿ ವರ್ಶ್ನಿ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಬರೋಡ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ವೈದ್ಯರು ಇಬ್ಬರೂ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

    ಕಾರಿನಲ್ಲಿದ್ದ ಛವಿ ಅವರ ತಂದೆ 54 ವರ್ಷದ ಶ್ಯಾಮಲಾಲ್, ಸಂಬಂಧಿ ಸೂರಜ್‌ಪಾಲ್ ಹಾಗೂ ಚಾಲಕ ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶ್ಯಾಮಲಾಲ್ ಅವರು ಉತ್ತರ ಪ್ರದೇಶದ ಮಹೌಖಾಸ್ ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಕುಟುಂಬ ಸೋಮವಾರ ರಾತ್ರಿ ಉಜ್ಜಯಿನಿಗೆ ತೀರ್ಥಯಾತ್ರೆಗೆ ತೆರಳಿತ್ತು. ಈ ವೇಳೆ ಮಾರ್ಗಮಧ್ಯೆ ಭೀಕರ ಅಪಘಾತ ಸಂಭವಿಸಿದೆ.

    7 ಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ಚಂದಾದಾರರು:
    ಅಪಘಾತದಲ್ಲಿ ಮೃತಪಟ್ಟ ಛವಿ ವರ್ಶ್ನಿ ಜನಪ್ರಿಯ ಯೂಟ್ಯೂಬರ್ ಆಗಿದ್ದರು. ಅವರ ಯೂಟ್ಯೂಬ್ ಚಾನೆಲ್‌ಗೆ 7 ಲಕ್ಷಕ್ಕೂ ಹೆಚ್ಚು ಚಂದಾದಾರರು ಇದ್ದರು. ಇನ್‌ಸ್ಟಾಗ್ರಾಂನಲ್ಲೂ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು.

    ಛವಿ ಅವರು 2021ರಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಆರಂಭದಲ್ಲಿ ತಮ್ಮ ದೈನಂದಿನ ಜೀವನಕ್ಕೆ ಸಂಬAಧಿಸಿದ ವ್ಲಾಗ್‌ಗಳು ಹಾಗೂ ಇತರ ವಿಡಿಯೋಗಳನ್ನು ಪ್ರಕಟಿಸುತ್ತಿದ್ದರು. ಬಳಿಕ ಅವರ ಜನಪ್ರಿಯತೆ ಹೆಚ್ಚಿದಂತೆ ಆನ್‌ಲೈನ್ ಗೇಮಿಂಗ್‌ಗೆ ಸಂಬAಧಿಸಿದ ವಿಡಿಯೋಗಳನ್ನು ಕೂಡ ಮಾಡುತ್ತಿದ್ದರು.

    ಛವಿ ಬಾಲ್ಯದಿಂದಲೇ ಪ್ರತಿಭಾವಂತೆಯಾಗಿದ್ದರು ಎಂದು ಅವರ ಸಂಬAಧಿ ಸಚಿನ್ ವರ್ಶ್ನಿ ತಿಳಿಸಿದ್ದಾರೆ. ಪದವಿ ಶಿಕ್ಷಣ ಪೂರ್ಣಗೊಳಿಸಿದ್ದ ಅವರು ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ ಮಾಡಿದ್ದರು. ಜೀವನದಲ್ಲಿ ವಿಭಿನ್ನವಾದದ್ದನ್ನು ಸಾಧಿಸಬೇಕೆಂಬ ಆಸಕ್ತಿ ಹೊಂದಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಛವಿ ಅವರ ವೃತ್ತಿಜೀವನಕ್ಕೆ ಕುಟುಂಬದವರು ಸಂಪೂರ್ಣ ಬೆಂಬಲ ನೀಡುತ್ತಿದ್ದರು ಎನ್ನಲಾಗಿದೆ.

    ಅಪಘಾತದ ಬಳಿಕ ಸಾರಿಕಾ ಮತ್ತು ಛವಿ ಅವರ ಮೃತದೇಹಗಳನ್ನು ಬರೋಡ್‌ನ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಬರೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎರ್ಟಿಗಾ ಕಾರು ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ವೇಗ, ಚಾಲಕರ ನಿರ್ಲಕ್ಷ್ಯ ಸೇರಿದಂತೆ ಇತರ ಕಾರಣಗಳಿದ್ದವೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.




    #national
    Previous Articleಜಿಮ್‌ನಿಂದ ಹೊರಬಂದ ಗಾಯಕನ ಮೇಲೆ 20 ಸುತ್ತು ಗುಂಡಿನ ದಾಳಿ; ಸ್ಥಳದಲ್ಲೇ ಸಾವು
    Next Article ಗಂಗಾ ನದಿ ದಡದಲ್ಲಿ ತರಬೇತಿ ವಿಮಾನ ಪತನ; ಕರ್ನಾಟಕ ಮೂಲದ ಇಬ್ಬರು ಪೈಲಟ್ ಸಾವು

    Related Posts

    9 ದಿನ ‘ಹರೇ ಕೃಷ್ಣ’ ಜಪ, ಜನ್ಮಾಷ್ಟಮಿಯಂದೇ ರಕ್ಷಣೆ: ಸಾವಿನ ದವಡೆಯಿಂದ ಪಾರಾದ ಕಾರ್ಮಿಕ

    September 4, 2026

    ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಭವಿಷ್ಯದಲ್ಲಿ ಬ್ರೇಕ್ ಬೀಳತ್ತಾ?-ಆಟೋ ಕಂಪನಿಗಳಿಗೆ ಸೂಚನೆ ಕೊಟ್ಟ ಪ್ರಧಾನಮಂತ್ರಿ ಸಲಹೆಗಾರ..!

    September 4, 2026

    ಅಮೆರಿಕದ ‘ಮೋಸ್ಟ್ ವಾಂಟೆಡ್’ ಪಟ್ಟಿಗೆ ಭಾರತೀಯ ಮೂಲದ ವಂಚಕ: ಬಂಧನಕ್ಕೆ ₹1.25 ಕೋಟಿ ಬಹುಮಾನ

    September 4, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪುತ್ತೂರು: ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಕೇರಳದ ಆರೋಪಿಯ ಬಂಧನ

    September 4, 2026

    ಸುಮಂತ್ ನಿಗೂಢ ಸಾವು ಪ್ರಕರಣ: ಸಹೋದರ, ಇಬ್ಬರು ಚಿಕ್ಕಪ್ಪನ ಬ್ರೈನ್ ಮ್ಯಾಪಿಂಗ್

    September 4, 2026

    ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನಗಳಿಂದ ಡೀಸೆಲ್ ಕಳ್ಳತನ: ಉಪ್ಪಿನಂಗಡಿಯಲ್ಲಿ ಇಬ್ಬರ ಬಂಧನ

    September 4, 2026

    9 ದಿನ ‘ಹರೇ ಕೃಷ್ಣ’ ಜಪ, ಜನ್ಮಾಷ್ಟಮಿಯಂದೇ ರಕ್ಷಣೆ: ಸಾವಿನ ದವಡೆಯಿಂದ ಪಾರಾದ ಕಾರ್ಮಿಕ

    September 4, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಾಸನ ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭೀಕರ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿಗೂ ಹಲ್ಲೆ

    September 4, 2026

    ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    September 4, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.