Close Menu
    What's Hot

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026

    IPS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ಜನರಿಂದ ಹಣ ವಸೂಲಿ ಮಾಡುತ್ತಿದ್ದ 17ರ ಬಾಲಕನ ಬಂಧನ

    September 3, 2026

    KPSC ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪಗೆ ಹೈಕೋರ್ಟ್‌ ಛೀಮಾರಿ

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಅಣ್ಣನ ಪ್ರೇಮಕ್ಕೆ ವಿರೋಧ; ತಮ್ಮನ ಕೈಯಲ್ಲಿ ಯುವತಿಯ ಬರ್ಬರ ಹತ್ಯೆ
    ಅಪರಾಧ

    ಅಣ್ಣನ ಪ್ರೇಮಕ್ಕೆ ವಿರೋಧ; ತಮ್ಮನ ಕೈಯಲ್ಲಿ ಯುವತಿಯ ಬರ್ಬರ ಹತ್ಯೆ

    adminBy adminJuly 16, 2026No Comments1 Min Read

    ಬೆಂಗಳೂರು : ಅಣ್ಣನ ಪ್ರೇಮ ಪ್ರಸ್ತಾಪವನ್ನು ತಳ್ಳಿಹಾಕಿದ ಕಾರಣಕ್ಕೆ ಆತನ ಸಹೋದರನೇ ಯುವತಿಯೊಬ್ಬಳಿಗೆ ಸಾರ್ವಜನಿಕ ರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಇಲ್ಲಿನ ಕೋಡಿಹಳ್ಳಿಯ ಹೆಚ್‌ಎಎಲ್  ರಸ್ತೆಯಲ್ಲಿ ಸಂಭವಿಸಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಕಾನೂನು ವಿದ್ಯಾರ್ಥಿನಿ ಅಮೃತಾ (21) ಚಿಕಿತ್ಸೆ ಫಲಿಸದೇ ಬುಧವಾರ (ಜುಲೈ 15) ಸಂಜೆ ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೂರ್ಯ ಹಾಗೂ ಆತನ ಅಣ್ಣ ಧನುಷ್‌ನನ್ನು ಜೀವನ್‌ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.

    ಪೊಲೀಸ್ ಮೂಲಗಳ ಪ್ರಕಾರ, ಓಂ ಶಕ್ತಿ ಮಾಲೆ ಹಾಕುವ ಧಾರ್ಮಿಕ ಕಾರ್ಯಕ್ರಮದ ವೇಳೆ ಮೃತ ಅಮೃತಾ ಹಾಗೂ ಧನುಷ್ ಕುಟುಂಬಗಳ ನಡುವೆ ಪರಿಚಯವಾಗಿತ್ತು. ಇದು ಇಬ್ಬರ ನಡುವೆ ಆತ್ಮೀಯ ಪ್ರೀತಿಯಾಗಿ ಬದಲಾಗಿತ್ತು. ಆದರೆ, ಧನುಷ್ ತನಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿರುವ ಮತ್ತು ತನಗೊಂದು ಮಗು ಇರುವ ಸತ್ಯವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದನು. ಇತ್ತೀಚೆಗೆ ಈ ವಂಚನೆಯ ವಿಚಾರ ಅಮೃತಾಳಿಗೆ ತಿಳಿಯುತ್ತಿದ್ದಂತೆಯೇ ಆಕೆ ಆತನಿಂದ ಸಂಪೂರ್ಣವಾಗಿ ದೂರವಾಗಿದ್ದಳು ಹಾಗೂ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಳು.

    ತನ್ನ ಅಣ್ಣನ ಪ್ರೀತಿಯನ್ನು ನಿರಾಕರಿಸಿದ ಅಮೃತಾಳನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಧನುಷ್‌ನ ತಮ್ಮ ಸೂರ್ಯ ಸಂಚು ಹೂಡಿದ್ದನು. ಅದರಂತೆ ಜುಲೈ 13 ರಂದು ಕೋಡಿಹಳ್ಳಿಯಲ್ಲಿರುವ ಯುವತಿಯ ಮನೆಯ ಬಳಿ ತೆರಳಿದ ಸೂರ್ಯ, ಅಮೃತಾಳೊಂದಿಗೆ ತೀವ್ರ ಗಲಾಟೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದಾಗ ಏಕಾಏಕಿ ತಾನು ತಂದಿದ್ದ ಚಾಕುವಿನಿಂದ ಅಮೃತಾಳ ಬೆನ್ನು ಹಾಗೂ ಎದೆಗೆ ಮನಬಂದಂತೆ ಇರಿದು ಪರಾರಿಯಾಗಿದ್ದನು.

    ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ ಯುವತಿಯನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ಗಾಯದಿಂದಾಗಿ ಆಕೆ ಬುಧವಾರ ಸಂಜೆ ಕೊನೆಯುಸಿರೆಳೆದಿದ್ದಾಳೆ. ಮೃತ ಅಮೃತಾ ಕಾನೂನು ವ್ಯಾಸಂಗ ಮಾಡುತ್ತಾ, ಪಾರ್ಟ್ ಟೈಮ್ ಆಗಿ ಪಿಜ್ಜಾ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಜೀವನ್‌ಭೀಮಾನಗರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

    #crime #karnataka
    Previous Articleಇಸ್ರೋದಿಂದ ವಿಜ್ಞಾನಿಗಳ ನಿರ್ಗಮನ ಹೆಚ್ಚಳ; ರಾಜೀನಾಮೆ ಪ್ರಕ್ರಿಯೆ ಬಿಗಿಗೊಳಿಸಿದ ಕೇಂದ್ರ
    Next Article ಮನೆ ಮುಂದೆ ಆಟವಾಡುತ್ತಿದ್ದ 18 ತಿಂಗಳ ಕಂದಮ್ಮನನ್ನು ಕಚ್ಚಿ ಕೊಂದ ಬೀದಿನಾಯಿಗಳು

    Related Posts

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026

    IPS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ಜನರಿಂದ ಹಣ ವಸೂಲಿ ಮಾಡುತ್ತಿದ್ದ 17ರ ಬಾಲಕನ ಬಂಧನ

    September 3, 2026

    KPSC ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪಗೆ ಹೈಕೋರ್ಟ್‌ ಛೀಮಾರಿ

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026

    IPS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ಜನರಿಂದ ಹಣ ವಸೂಲಿ ಮಾಡುತ್ತಿದ್ದ 17ರ ಬಾಲಕನ ಬಂಧನ

    September 3, 2026

    KPSC ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪಗೆ ಹೈಕೋರ್ಟ್‌ ಛೀಮಾರಿ

    September 3, 2026

    ಉಡುಪಿ: ಪಡಿತರ ಅಕ್ಕಿ ವಿಚಾರದಲ್ಲಿ ಅವಾಚ್ಯ ನಿಂದನೆ, ಕೊಲೆ ಬೆದರಿಕೆ; ಮೂವರು ಆರೋಪಿಗಳ ಬಂಧನ

    September 3, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026

    IPS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ಜನರಿಂದ ಹಣ ವಸೂಲಿ ಮಾಡುತ್ತಿದ್ದ 17ರ ಬಾಲಕನ ಬಂಧನ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.