Author: admin
ಕೋಝಿಕೋಡ್: ಕೇರಳದ ಕೋಝಿಕೋಡ್ ಜಿಲ್ಲೆಯ ವಡಕರದಲ್ಲಿ ಎಂಡಿಎಂಎ (MDMA) ಮಾದಕ ದ್ರವ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಗುತ್ತಿಗೆ ಆಧಾರಿತ ಶಿಕ್ಷಕಿಯರಾದ ಕೀರ್ತನಾ ಹಾಗೂ ಕಾವ್ಯಾ ಇಬ್ಬರನ್ನೂ ಶಿಕ್ಷಣ ಇಲಾಖೆ ಸೇವೆಯಿಂದ ಅಧಿಕೃತವಾಗಿ ವಜಾಗೊಳಿಸಿದೆ. ಆರೋಪಿ ಕೀರ್ತನಾ ಶಾಲೆಗಳಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಮುಂಚೂಣಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ಜುಂಬಾ ನೃತ್ಯ ತರಗತಿಗಳನ್ನು ಸಹ ನಡೆಸುತ್ತಿದ್ದಳು. ಆದರೆ ರಹಸ್ಯವಾಗಿ ಮಾದಕ ದ್ರವ್ಯ ಗ್ಯಾಂಗ್‌ಗಳಲ್ಲಿ ‘ಲೇಡಿ ಡಾನ್’ ಎಂದೇ ಗುರುತಿಸಿಕೊಂಡಿದ್ದ ಈಕೆ, ಸಹೋದ್ಯೋಗಿ ಕಾವ್ಯಾ ಜೊತೆಗೂಡಿ ನೆಟ್‌ವರ್ಕ್ ವಿಸ್ತರಿಸಿದ್ದಳು. ಪೊಲೀಸ್ ಕಾರ್ಯಾಚರಣೆ ‘ಆಪರೇಷನ್ ತೂಫಾನ್’ ವೇಳೆ 2 ಗ್ರಾಂ MDMA ಯೊಂದಿಗೆ ಸಿಕ್ಕಿಬಿದ್ದ ಸಫ್ವಾನ್ ಎಂಬಾತ ನೀಡಿದ ಸುಳಿವಿನ ಆಧಾರದಲ್ಲಿ ಈ ಇಬ್ಬರು ಶಿಕ್ಷಕಿಯರ ಮುಖವಾಡ ಕಳಚಿಬಿದ್ದಿತ್ತು. ಆರೋಪಿಗಳು ಯುವಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಪೂರೈಸುತ್ತಿದ್ದರು. ಗ್ರಾಹಕರಿಂದ ಕ್ಯೂಆರ್ (QR) ಕೋಡ್ ಮೂಲಕ ಆನ್‌ಲೈನ್‌ನಲ್ಲೇ ಹಣ ಪಡೆದು, ಗೂಗಲ್ ಮ್ಯಾಪ್ ಲೋಕೇಶನ್ ಕಳುಹಿಸಿ ಎಂಡಿಎಂಎ ಡೆಲಿವರಿ ಮಾಡುತ್ತಿದ್ದರು. ಇವರ ಖಾತೆಗಳಿಗೆ…
ಬೆಂಗಳೂರು: ಅಕ್ಕಿ, ತುಪ್ಪ ಸೇರಿದಂತೆ ಹಲವು ದಿನಸಿ ವಸ್ತುಗಳ ಬೆಲೆ ಹೆಚ್ಚಳದ ಬೆನ್ನಲ್ಲೇ ಇದೀಗ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳ ದರವೂ ಏರಿಕೆಯಾಗಿದೆ. ಇದರಿಂದ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಮತ್ತೊಂದು ಹೊಡೆತ ಬಿದ್ದಿದೆ. ಮೆಣಸಿನಕಾಯಿ, ಜೀರಿಗೆ, ಧನಿಯಾ, ಮೆಂತೆ, ಸಾಸಿವೆ, ಚಕ್ಕೆ, ಲವಂಗ, ಏಲಕ್ಕಿ ಸೇರಿದಂತೆ ಬಹುತೇಕ ಪ್ರಮುಖ ಮಸಾಲೆ ಪದಾರ್ಥಗಳ ದರ ಕಳೆದ ಕೆಲವು ವಾರಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅಡುಗೆಯ ರುಚಿ ಮತ್ತು ಸುವಾಸನೆ ಹೆಚ್ಚಿಸುವ ಈ ವಸ್ತುಗಳ ಬೆಲೆ ಹೆಚ್ಚಳದಿಂದ ಮನೆ ಬಳಕೆದಾರರ ಜೊತೆಗೆ ಹೋಟೆಲ್, ಬೇಕರಿ ಹಾಗೂ ಆಹಾರ ಉತ್ಪಾದನಾ ಕ್ಷೇತ್ರವೂ ಸಂಕಷ್ಟ ಎದುರಿಸುತ್ತಿದೆ. ವ್ಯಾಪಾರಿಗಳ ಪ್ರಕಾರ, ಸಾಗಾಣಿಕೆ ವೆಚ್ಚ ಏರಿಕೆ, ಕೆಲವು ಮಸಾಲೆ ಬೆಳೆಗಳ ಉತ್ಪಾದನೆ ಕುಸಿತ ಹಾಗೂ ಮಾರುಕಟ್ಟೆಯಲ್ಲಿ ಲಭ್ಯತೆ ಕಡಿಮೆಯಾಗಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ ಚಿಲ್ಲರೆ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಸಾಲೆ ಪದಾರ್ಥಗಳನ್ನು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಸಾಲೆ ಪದಾರ್ಥಗಳ ಹಳೆಯ ಹಾಗೂ…
ಚಿಕ್ಕಮಗಳೂರು: ಕಾಡುಹಂದಿ ಶಿಕಾರಿಗೆಂದು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ವಿಷಯ ಹೊರಬಾರದಂತೆ ಶವವನ್ನು ಹೂತುಹಾಕಿದ್ದ ಮೂವರು ಆರೋಪಿಗಳನ್ನು ಯಗಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೊಣ್ಣೆಕೋರನಹಳ್ಳಿಯಲ್ಲಿ ಈ ದೋರಣ ಘಟನೆ ನಡೆದಿದೆ. ಗ್ರಾಮದ ಕರಿಯಪ್ಪ (55) ಮೃತಪಟ್ಟ ದುರದೃಷ್ಟಕರ ವ್ಯಕ್ತಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ಚಂದ್ರಪ್ಪ, ಕೆಂಚಪ್ಪ ಮತ್ತು ಯದುಕುಮಾರ್ ಎಂಬುವವರನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ. ದೊಣ್ಣೆಕೋರನಹಳ್ಳಿ ಗ್ರಾಮದ ಬಳಿ ಆರೋಪಿಗಳು ಕಾಡುಹಂದಿ ಬೇಟೆಯಾಡಲು ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರು. ಈ ವೇಳೆ ಅಲ್ಲಿಗೆ ತೆರಳಿದ್ದ ಕರಿಯಪ್ಪ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ತುಳಿದ ಪರಿಣಾಮ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಘಟನೆಯಿಂದ ಗಾಬರಿಗೊಂಡ ಆರೋಪಿಗಳು, ಪ್ರಕರಣದಿಂದ ನುಣುಚಿಕೊಳ್ಳಲು ಯಾರಿಗೆ ವಿಷಯ ತಿಳಿಯದಂತೆ ಕರಿಯಪ್ಪ ಅವರ ಶವವನ್ನು ಗುಟ್ಟಾಗಿ ಹೂತುಹಾಕಿ ಪುರಾವೆ ನಾಶಪಡಿಸಲು ಯತ್ನಿಸಿದ್ದಾರೆ. ಇತ್ತ ಕರಿಯಪ್ಪ ಅವರು ಮನೆಗೆ ವಾಪಸ್ ಬಾರದೇ ಇದ್ದಾಗ ಆತಂಕಗೊಂಡ ಕುಟುಂಬಸ್ಥರು ಮತ್ತು ಸಂಬಂಧಿಕರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ.…
ವಾರಣಾಸಿ : ಕ್ಲಾಸ್‌ರೂಮ್‌ನಲ್ಲಿ ಆಕಸ್ಮಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಕೋಪಗೊಂಡ ಪ್ಲೇ ಸ್ಕೂಲ್ ಶಿಕ್ಷಕಿಯೊಬ್ಬಳು 5 ವರ್ಷದ ಬಾಲಕನ ಖಾಸಗಿ ಭಾಗಗಳಿಗೆ ಬಿಸಿ ಚಾಕುವಿನಿಂದ ಸುಟ್ಟು ವಿಕೃತ ಕ್ರೌರ್ಯ ಮೆರೆದಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಘಟನೆ ಕುರಿತು ದೂರು ನೀಡಲು ಬಂದ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ವಾರಣಾಸಿಯ ಆಕಥಾ ಪ್ರದೇಶದಲ್ಲಿರುವ ಸೆರೆನ್ ಸೋನಿ ಪ್ಲೇ ಶಾಲೆಯಲ್ಲಿ ಜುಲೈ 24 ರಂದು ಈ ಭೀಕರ ಘಟನೆ ನಡೆದಿದೆ. 5 ವರ್ಷದ ಬಾಲಕ ತರಗತಿ ಶಿಕ್ಷಕಿಯಲ್ಲಿ ಶೌಚಾಲಯಕ್ಕೆ ಹೋಗಲು ಅನುಮತಿ ಕೇಳಿದ್ದ. ಆದರೆ ಶಿಕ್ಷಕಿ ಅನುಮತಿ ನೀಡದ ಕಾರಣ, ಮಗು ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿದೆ. ಇದರಿಂದ ಆಕ್ರೋಶಗೊಂಡ ಶಿಕ್ಷಕಿ, ಮಗುವನ್ನು ಪಕ್ಕದ ಕೋಣೆಗೆ ಎಳೆದೊಯ್ದು, ಗ್ಯಾಸ್ ಸ್ಟೌವ್ ಆನ್ ಮಾಡಿ ಚಾಕುವನ್ನು ಬಿಸಿ ಮಾಡಿ ಮಗುವಿನ ಖಾಸಗಿ ಭಾಗಕ್ಕೆ ಸುಟ್ಟಿದ್ದಾಳೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಭೀಕರ…
ಕಾಪು : ಉಡುಪಿ ಮತ್ತು ಮಂಗಳೂರು ನಡುವೆ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ನಡುವಿನ ಟೈಮಿಂಗ್ಸ್ ಸ್ಪರ್ಧೆ ಮತ್ತೊಮ್ಮೆ ಮಿತಿಮೀರಿದ್ದು, ತುಂಬಿದ ಪ್ರಯಾಣಿಕರಿದ್ದಾಗಲೇ ಬಸ್‌ಗಳನ್ನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ರಸ್ತೆ ತಡೆದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ ಭೀಕರ ಘಟನೆ ಸೋಮವಾರ (ಜುಲೈ 27) ಬೆಳಿಗ್ಗೆ ಕಾಪು ಬಸ್ ನಿಲ್ದಾಣದ ಸರ್ವಿಸ್ ರಸ್ತೆಯಲ್ಲಿ ಸಂಭವಿಸಿದೆ. ಉಡುಪಿಯಿಂದ ಮಂಗಳೂರಿಗೆ ಹೊರಟಿದ್ದ ‘ಸಂದೇಶ್ ಟ್ರಾವೆಲ್ಸ್’ ಹಾಗೂ ‘ಆನಂದ್ ಟ್ರಾವೆಲ್ಸ್’ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರ ನಡುವೆ ಟೈಮಿಂಗ್ಸ್ ವಿಚಾರವಾಗಿ ಉದ್ಯಾವರದಿಂದಲೇ ಜಗಳ ಆರಂಭವಾಗಿತ್ತು. ಬಸ್ಸುಗಳು ಕಾಪು ತಲುಪುತ್ತಿದ್ದಂತೆ, ಸಂದೇಶ್ ಟ್ರಾವೆಲ್ಸ್ ಬಸ್ ಕಾಪು ಸರ್ವಿಸ್ ರಸ್ತೆಯ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸಿತ್ತು. ಈ ವೇಳೆ ಹಿಂದೆ ಬಂದ ಆನಂದ್ ಟ್ರಾವೆಲ್ಸ್ ಬಸ್ ಚಾಲಕ ಆಕ್ರೋಶದಿಂದ ನೇರವಾಗಿ ಸಂದೇಶ್ ಬಸ್‌ನ ಬಲಭಾಗಕ್ಕೆ ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದಿದ್ದಾನೆ ಢಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿ ಬೊಬ್ಬೆ ಹೊಡೆದಿದ್ದಾರೆ. ಅಪಘಾತದ ಬಳಿಕ ಚಾಲಕರು ರಸ್ತೆಯಲ್ಲೇ ಬಸ್‌ಗಳನ್ನು…
ಕಣಿಯೂರು ಗ್ರಾಮದ ಅಡೆಂಜದಲ್ಲಿ ಪತ್ತೆಯಾದ ನಕಲಿ ನೋಟು ಮುದ್ರಣ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಹಾಗೂ ಬಂಧಿತ ಆರೋಪಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ್ ಪುಂಡಲೀಕ್ ಶೋಳಂಬಿ ವಾಸವಾಗಿದ್ದ ಪಿಲಿಚಂಡಿಕಲ್ಲಿನ ಬಾಡಿಗೆ ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಪ್ರಿಂಟರ್, ರಾಸಾಯನಿಕ ದ್ರಾವಣವಿದ್ದ ಬಾಟಲಿಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜುಲೈ 16ರಂದು ಕಣಿಯೂರು ಗ್ರಾಮದ ಅಡೆಂಜದಲ್ಲಿರುವ ಇದ್ರೀಸ್ ಎಂಬುವರಿಗೆ ಸೇರಿದ ಮನೆಯಲ್ಲಿ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಕಲಿ ಕರೆನ್ಸಿ ನೋಟುಗಳು ಹಾಗೂ ಅವುಗಳನ್ನು ಮುದ್ರಿಸಲು ಬಳಸಲಾಗುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ನಡೆದ ತನಿಖೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇದುವರೆಗೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪುತ್ತೂರು ಕಸಬಾ ಗ್ರಾಮದ ಇಬ್ರಾಹಿಂ (60), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಶರೀಫ್ (51), ಉತ್ತರ ಕನ್ನಡ…
ಮಣಿಪಾಲ: ಪಾದಚಾರಿಯನ್ನು ರಕ್ಷಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಈಚರ್ ಲಾರಿಯೊಂದು ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು, ಬಳಿಕ ಮನೆಯೊಂದರ ಅಂಗಳಕ್ಕೆ ನುಗ್ಗಿದ ಘಟನೆ ಪೆರಂಪಳ್ಳಿಯ ಮೀನು ಮಾರುಕಟ್ಟೆ ಸಮೀಪ ಜುಲೈ 25 ರ ರಾತ್ರಿ ಸಂಭವಿಸಿದೆ. ಕಾರ್ಕಳ ಮೂಲದ ಉಮೇಶ್ ಎಂಬುವವರು ಲಾರಿಯನ್ನು ಮಣಿಪಾಲದಿಂದ ಪೆರಂಪಳ್ಳಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಏಕಾಏಕಿ ರಸ್ತೆ ದಾಟಿದ್ದಾರೆ. ಅವರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ತಕ್ಷಣವೇ ಲಾರಿಯನ್ನು ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗೆ ಸೈಡ್ ಹೊಡೆದು, ಸ್ಥಳೀಯ ನಿವಾಸಿ ರವಿ ಪೂಜಾರಿ ಎಂಬವರ ಮನೆಯ ಅಂಗಳಕ್ಕೆ ನುಗ್ಗಿದೆ. ಅಪಘಾತದ ರಭಸಕ್ಕೆ ರವಿ ಅವರ ಮನೆಯಂಗಳದ ಸಿಮೆಂಟ್ ಶೀಟ್‌ಗೆ ಹಾನಿಯಾಗಿದ್ದು, ಲಾರಿಯ ಮುಂಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಅದೃಷ್ಟವಶಾತ್ ಅಪಘಾತ ಸಂಭವಿಸಿದ ಸಮಯದಲ್ಲಿ ರಸ್ತೆ ಬದಿಯಲ್ಲಾಗಲಿ ಅಥವಾ ಮನೆಯ ಅಂಗಳದಲ್ಲಾಗಲಿ ಯಾರೂ ಇಲ್ಲದಿದ್ದರಿಂದ ಭಾರಿ…
ವಾಷಿಂಗ್ಟನ್: ಆಹಾರ ಉತ್ಸವದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ ಅಮೆರಿಕದ ಸಿಯಾಟಲ್‌ನಲ್ಲಿ ನಡೆದಿದೆ. ಸಿಯಾಟಲ್ ಸೆಂಟರ್‌ನಲ್ಲಿ ಬೈಟ್ ಆಫ್ ಸಿಯಾಟಲ್ ಉತ್ಸವ ನಡೆಯುತ್ತಿದೆ. ಸಂಜೆ 6 ಗಂಟೆ ಸುಮಾರಿಗೆ ಸ್ಥಳದಲ್ಲಿ ಗುಂಡಿನ ಚಕಮಕಿ ನಡೆದಿದೆ. ದಾಳಿಗೆ ಬಲಿಯಾದವರ ಮೃತದೇಹಗಳನ್ನು ಹಾರ್ಬರ್‌ವ್ಯೂ ವೈದ್ಯಕೀಯ ಕೇಂದ್ರಕ್ಕೆ ಸಾಗಿಸಲಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ದಾಳಿ ಘಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸ್ಥಳದಲ್ಲಿ ಗುಂಡಿನ ಶಬ್ದ ಕೇಳಿದ ತಕ್ಷಣ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಥಳದಲ್ಲಿ ಕನಿಷ್ಠ 7ರಿಂದ 8 ಗುಂಡಿನ ಶಬ್ದ ಕೇಳಿಬಂದಿದೆ. ಇನ್ನು ಸಾಮೂಹಿಕ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನದ ಬಗ್ಗೆ ಪೊಲೀಸರಿಂದ ಮಾಹಿತಿ ಲಭ್ಯವಾಗಿಲ್ಲ.
ಬಂಟ್ವಾಳ: ಇಡ್ಕಿದು ಗ್ರಾಮದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ವೃದ್ಧನ ಮೇಲೆ ಹಲ್ಲೆ ನಡೆಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡಿದ್ದು, ಸಮೀಪದ ಮತ್ತೊಂದು ಮನೆಯಿಂದ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದಾರೆ. ಗ್ರಾಮದಲ್ಲಿನ ನಡೆದ ಸರಣಿ ಕಳ್ಳತನ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ. ಇಡ್ಕಿದು ಗ್ರಾಮದ ನಿವಾಸಿ ಹಾಗೂ ನಿವೃತ್ತ ವೈದ್ಯರಾದ ಕೆ. ಸೂರ್ಯನಾರಾಯಣ (79) ಅವರು ಮನೆಯಲ್ಲಿ ಮಲಗಿದ್ದ ವೇಳೆ, ತಡರಾತ್ರಿ ಅಪರಿಚಿತರು ಮನೆಯೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ.ಶಬ್ದ ಕೇಳಿ ಎಚ್ಚರಗೊಂಡ ಸೂರ್ಯನಾರಾಯಣ ಅವರು ಮನೆಯೊಳಗೆ ಇಬ್ಬರು ಕಳ್ಳರು ಮನೆಗೆ ಪ್ರವೇಶಿಸಿರುವುದನ್ನು ಗಮನಿಸಿದ್ದಾರೆ. ಆರೋಪಿಗಳು ಅವರ ಹೊಟ್ಟೆಗೆ ಬಲವಾಗಿ ಹೊಡೆದು, ಅವರ ಕುತ್ತಿಗೆಯಲ್ಲಿದ್ದ ಸುಮಾರು 20 ಗ್ರಾಂ ತೂಕದ, ಅಂದಾಜು 2.60 ರೂ. ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಮನೆಯ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ.ಮನೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗೋಡೆಯಲ್ಲಿ ಬಿಟ್ಟಿದ್ದ ತೆರೆಯ ಮೂಲಕ ಕಳ್ಳರು ಮನೆಯೊಳಗೆ ಪ್ರವೇಶಿಸಿದ್ದಿರಬಹುದು ಎಂದು ಶಂಕಿಸಲಾಗಿದೆ. ಈ ವೇಳೆ ಮನೆಯ ಮೇಲಂತಸ್ತಿನಲ್ಲಿ ಮಲಗಿದ್ದ ಸೂರ್ಯನಾರಾಯಣ…
ಮಂಗಳೂರು : ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿದೇಶಿ ನಗದು, ಐಫೋನ್, ಪಾಸ್‌ಪೋರ್ಟ್ ಹಾಗೂ ಚಿನ್ನದ ಉಂಗುರವನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಮಯಪ್ರಜ್ಞೆಯಿಂದ ಮಾಲೀಕರಿಗೆ ಸುರಕ್ಷಿತವಾಗಿ ತಲುಪಿಸಿದೆ. ಜುಲೈ 26 ರಂದು ಬೆಳಿಗ್ಗೆ ಸುಮಾರು 6:15 ರ ಸುಮಾರಿಗೆ ವಿಮಾನ ನಿಲ್ದಾಣದ ಕೆಳ ಅಂತಸ್ತಿನ ಪಾರ್ಕಿಂಗ್ ಪ್ರದೇಶದಲ್ಲಿದ್ದ ಲಗೇಜ್ ಟ್ರಾಲಿಯೊಂದರ ಮೇಲೆ ಕಪ್ಪು ಬಣ್ಣದ ಸಣ್ಣ ಪರ್ಸ್ ಅನ್ನು ಸೆಕ್ಯುರಿಟಿ ಸಿಬ್ಬಂದಿ ವಿಠಲ್ ಹೊಸಮನಿ ಗಮನಿಸಿದ್ದಾರೆ. ತಕ್ಷಣವೇ ಅವರು ಸಿಐಎಸ್‌ಎಫ್ ಪಡೆಯ ಕ್ಯೂಆರ್‌ಟಿ ತಂಡಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS) ಹಾಗೂ ಶ್ವಾನ ದಳ ತಪಾಸಣೆ ನಡೆಸಿ, ಅಪಾಯಕಾರಿ ವಸ್ತುಗಳಿಲ್ಲ ಎಂದು ಖಚಿತಪಡಿಸಿಕೊಂಡವು. ಪರ್ಸ್ ತೆರೆದು ಪರಿಶೀಲಿಸಿದಾಗ ಅದರಲ್ಲಿ ನಿಶಾಲ್ ಶಹೀಕ್ ಹೆಸರಿನ ಪಾಸ್‌ಪೋರ್ಟ್, ಐಫೋನ್, ಒಂದು ಚಿನ್ನದ ಉಂಗುರ, 10,000 ಅಮೆರಿಕನ್ ಡಾಲರ್…



